ಪುತ್ತೂರು: ಪ್ರತಿಭಾವಂತ ಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ನಡೆಸಿದ ಪ್ರತಿಭಾನ್ವೇಷಣೆ ಪರೀಕ್ಷೆ “ಮೇಧಾ-2024” ರಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಲವು ವಿದ್ಯಾರ್ಥಿಗಳು ಅಗ್ರ 20ರೊಳಗೆ ಸ್ಥಾನ ಗಳಿಸಿ ಕಾಲೇಜಿನಿಂದ ಕೊಡಮಾಡುವ ವಿಶೇಷ ಸೌಲಭ್ಯಗಳಿಗೆ ಅರ್ಹತೆ ಗಳಿಸಿರುತ್ತಾರೆ. ಇವರಲ್ಲಿ ದಾಮೋದರ್ ಮತ್ತು ರಶ್ಮಿ ದಂಪತಿಗಳ ಪುತ್ರ ಗಮನ್ (2ನೇ Rank), ಡಾ.ಕೃಷ್ಣಪ್ರಸಾದ್ ಮತ್ತು ಡಾ. ಅಮೃತ ಪ್ರಸಾದ್ ದಂಪತಿಗಳ ಪುತ್ರಿ ಚಿನ್ಮಯಿ (3ನೇ rank) ಡಾ. ಕೃಷ್ಣ ಪ್ರಸನ್ನ ಮತ್ತು ಪ್ರತಿಭಾ ಪ್ರಸನ್ನ ದಂಪತಿಗಳ ಪುತ್ರ ಪ್ರಣವ್ ಕೃಷ್ಣ (6ನೇ rank) ಪಾಂಡಿ ಕಣ್ಣನ್ ಮತ್ತು ಜಯಂತಿ ದಂಪತಿಗಳ ಪುತ್ರ ಲಿಕೀತನ್ (8ನೇ rank) ಹಾಗೂ ಸುಧಾಕರ ಶೆಟ್ಟಿ ಮತ್ತು ಪ್ರವೀಣ ಶೆಟ್ಟಿ ದಂಪತಿಗಳ ಪುತ್ರ ಪ್ರತ್ಯೂಷ್ ಶೆಟ್ಟಿ (9ನೇ rank) ಅಗ್ರ 10 ರ ಒಳಗಿನ ಸ್ಥಾನ ಗಳಿಸಿ ಕಾಲೇಜ್ ವತಿಯಿಂದ ಪದವಿ ಪೂರ್ವ ಭಾಗದಲ್ಲಿ ಉಚಿತ ಶಿಕ್ಷಣ ಹಾಗೂ ಜೆ.ಇ.ಇ. ಮತ್ತು ನೀಟ್ ಪರೀಕ್ಷೆಗಳ ಉಚಿತ ತರಬೇತಿ ಪಡೆಯಲು ಅವಕಾಶ ಪಡೆದಿದ್ದಾರೆ. ಪದ್ಮನಾಭ ನಾಯಕ್ ಮತ್ತು ಪೂರ್ಣೇಶ್ವರಿ ದಂಪತಿಗಳ ಪುತ್ರ ಪವನ್ ಪಿ.ಎ, ವೆಂಕಟರಾಜ ಮತ್ತು ಶೈಲ ಶ್ರೀ ದಂಪತಿಗಳ ಪುತ್ರ ಕಿಶನ್ ಬಿ, ಸತೀಶ್ ಮತ್ತು ಶಾಂಭವಿ ದಂಪತಿಗಳ ಪುತ್ರ ಪ್ರಜ್ವಲ್ ಎಸ್, ರಾಮನಾಥ ನಾಯಕ್ ಮತ್ತು ವಂದನಾ ನಾಯಕ್ ದಂಪತಿಗಳ ಪುತ್ರಿ ತನ್ವಿ ನಾಯಕ್ ಹಾಗೂ ಸುರೇಶ್ ಮಣಿಯಾಣಿ ಮತ್ತು ರಾಜೇಶ್ವರಿ ದಂಪತಿಗಳ ಪುತ್ರ ಮೋನಿಶ್ ಎಸ್.ಆರ್ ಅಗ್ರ 20 ಒಳಗಿನ rank ಗಳಿಸಿ ಉಚಿತ ಪದವಿಪೂರ್ವ ಶಿಕ್ಷಣಕ್ಕೆ ಅರ್ಹತೆ ಗಳಿಸಿರುತ್ತಾರೆ.