ಪುತ್ತೂರು: ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವು ಇತ್ತೀಚೆಗೆ ಶಾಲಾ ವಠಾರದಲ್ಲಿ ನಡೆಯಿತು. ಇದೇ ಸಂದರ್ಭ ಮಕ್ಕಳ ಕ್ರೀಡೋಪಕರಣ ಉದ್ಘಾಟನೆ ಮಾಡಲಾಯಿತು.
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ ಶಿವಾನಂದ ಅವರು ಕಾರ್ಯಕ್ರಮ ಉದ್ಘಾಟಿಸಿ, ಚಾಲನೆ ನೀಡಿ ಮಕ್ಕಳ ಪ್ರತಿಭೆಯನ್ನು ಹೊರಹಮ್ಮಿಸಲು ಸಾಮಾಜಿಕ ಜಾಲತಾಣವು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದರು.
ಮಕ್ಕಳ ಕ್ರೀಡೋಪಕರಣ ಉದ್ಘಾಟನೆ:
ಶಾಲಾ ವಠಾರದಲ್ಲಿ ನೂತನವಾಗಿ ನಿರ್ಮಿಸಿದ ಸಣ್ಣ ಮಕ್ಕಳ ಕ್ರೀಡೂಪಕರಣವನ್ನು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರು ಉದ್ಘಾಟಿಸಿ, ಪಠ್ಯದ ಜೊತೆಗೆ ಮಕ್ಕಳಲ್ಲಿರುವ ವಿವಿಧ ಚಟುವಟಿಕೆಗಳನ್ನು ಹೊರತರಲು ಉತ್ತಮವಾದ ವೇದಿಕೆಯಿದೆಂದು ಹೇಳಿ ಶುಭ ಹಾರೈಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅವರು ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ನಗರಸಭೆ ಸ್ಥಾಯಿ ಸಮಿತ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಸದಸ್ಯೆ ಗೌರಿ ಬನ್ನೂರು, ಶುಭ ಹಾರೈಸಿದರು.
ಸಾಂಸ್ಕೃತಿಕ ಹಾಗು ಕ್ರೀಡಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಲಾ ಪ್ರಾಂಶುಪಾಲೆ ಸವಿತಾ ಕುಮಾರಿ ಯವರು ವಾರ್ಷಿಕ ವರದಿಯನ್ನು ವಾಚಿಸಿದರು. ಹಾಗೂ ಶಾಲಾ ಶಿಕ್ಷಕಿ ವನಿತಾ ರವರು ಸಂವಿಧಾನದ ಪೂರ್ವ ಪೀಠಿಕೆಯನ್ನು ವಾಚಿಸಿದರು. ನಮ್ಮ ಶಾಲಾ ಉಪಾಧ್ಯಕ್ಷ ಉಮೇಶ್ ಮಳುವೇಲು ಹಾಗೂ ಶಾಲಾ ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಗೌಡ ಬಲ್ಯ, ನಿರ್ದೇಶಕ ಜಯಪ್ರಕಾಶ್ ಕಳುವಾಜೆ ,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗಡೆ, ಪ್ರಾಂಶುಪಾಲೆ ಸವಿತಾ ಕುಮಾರಿ, ಶಾಲಾ ನಾಯಕ ಮಾಸ್ಟರ್ ಅಧ್ವಿಕ್ ಬಂಜನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ದೇಶಕರಾದ ಪುಷ್ಪಾವತಿ ಗೌಡ ಕಳುವಾಜೆ, ವಾಮನ ಗೌಡ, ಗಂಗಾಧರ ಗೌಡ, ದೀಕ್ಷಾ ವಾಮನ ಗೌಡ, ಎ.ವಿ. ವನಿತ, ಪೋಷಕರು, ಭೋದಕ ಬೋಧಕೇತರವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲಾ ಪುಟಾಣಿಗಳಾದ ಶಿವಾನಿ, ಆನ್ವಿ ಅದ್ವಿತಿ ಬಂಜನ್, ಎ.ಯನ್. ಜೋತ್ಸ್ನ ಗೌಡ ಪ್ರಾರ್ಥಿಸಿದರು. ಶಾಲಾ ಸಂಚಾಲಕ ಎ. ವಿ. ನಾರಾಯಣ ಸ್ವಾಗತಿಸಿ, ಪ್ರತಿಭಾದೇವಿ ವಂದಿಸಿದರು. ಶಾಲಾ ಶಿಕ್ಷಕಿಯರಾದ ಶ್ರೀಮತಿ ಯಶುಭ ರೈ ಮತ್ತು ರಾಧಾ ಪ್ರದೀಪ್ ರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಮೊದಲಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.