ಪುತ್ತೂರು: ಪಡ್ನೂರು ಗ್ರಾಮದ ಕುಂಜಾರು ಮದಗಶ್ರೀ ಜನಾರ್ದನ ದೇವಸ್ಥಾನದಲ್ಲಿ ಜ.7 ಮತ್ತು 8 ರಂದು ವಾರ್ಷಿಕ ಜಾತ್ರೋತ್ಸವಕ್ಕೆ ಡಿ.31ರಂದು ಮುಹೂರ್ತ ನೆರವೇರಿತು.
ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಅರ್ಚಕ ಶ್ರೀಕಾಂತ್ ಭಟ್ ಗೊನೆ ಮೂಹೂರ್ತ ನೆರವೇರಿಸಿದರು.
ಉತ್ಸವ ಸಮಿತಿಯ ಅಧ್ಯಕ್ಷ ಹಾರಕರೆ ವೆಂಕಟರಮಣ ಭಟ್ ಸದಸ್ಯರುಗಳಾದ ರಾಧಾಕೃಷ್ಣ ಕುಂಜಾರು, ಯಶೋಧರ ಕುಂಜಾರು, ಶ್ರೀಧರ ಕುಂಜಾರು, ಮಧುಸೂಧನ ಪಡ್ಡಾಯೂರು, ಸತ್ಯನಾರಾಯಣರಾವ್ ಕುಂಜಾರು, ಬಾಳಪ್ಪ ನಾಯ್ಕ ದೇಮೇರು, ಸುದರ್ಶನ ರಾಮನಗರ, ಶವಿನ್ ಕುಂಜಾರು, ಗಣೇಶ್ ಕುಂಜಾರು ರವಿ ಕುಂಜಾರು ಮೊದಲಾದವರು ಭಾಗವಹಿಸಿದ್ದರು.