ಸವಣೂರು : ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಹಾಸಭೆ

0

ಸವಣೂರು : ಶ್ರೀರಾಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸವಣೂರು ಪಂಚಾಯತ್ ಇದರ ವಾರ್ಷಿಕ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ವಿಜಯ ಈಶ್ವರ ಗೌಡ ರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ನ ಕುಮಾರಧಾರ ಸಭಾಂಗಣದಲ್ಲಿ  ನಡೆಯಿತು. 

ಕಾರ್ಯಕ್ರಮವನ್ನು ಗ್ರಾ. ಪಂ. ನಿಕಟಪೂರ್ವ ಅಧ್ಯಕ್ಷೆ  ರಾಜೀವಿ.ವಿ.ಶೆಟ್ಟಿ ಅವರು ತೆಂಗಿನ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದರು.ವೇದಿಕೆಯಲ್ಲಿ ಗ್ರಾ. ಪಂ. ಕಾರ್ಯದರ್ಶಿ  ವಸಂತ ಶೆಟ್ಟಿ,ಒಕ್ಕೂಟದ ಉಪಾಧ್ಯಕ್ಷೆ ದಮಯಂತಿ ಬಸ್ತಿ, ಕಾರ್ಯದರ್ಶಿ ಪೂರ್ಣಿಮಾ ಮಹೇಶ್, ಜತೆ ಕಾರ್ಯದರ್ಶಿ ಸುಶ್ಮಿತಾ ಉಪ್ಪಳಿಗೆ ,ಕೋಶಾಧಿಕಾರಿ ಸರೋಜಿನಿ ಎಂ,  ಅಂಗನವಾಡಿ ಕಾರ್ಯಕರ್ತೆ ಕುಮಾರಿ ಸ್ವಾತಿಪ್ರಿಯ ಉಪಸ್ಥಿತರಿದ್ದರು.

 ವಲಯ ಮೇಲ್ವಿಚಾರಕಿ ನಮಿತಾ ಅವರು, ಸಂಜೀವಿನಿಯ ಕಾರ್ಯಚಟುವಟಿಕೆಗಳು ಮತ್ತು ಘನ ತ್ಯಾಜ ಘಟಕದ ಬಗ್ಗೆ ಮಾಹಿತಿ ನೀಡಿದರು .

ಒಕ್ಕೂಟದ ವರದಿಯನ್ನು ಕಾರ್ಯದರ್ಶಿ ಪೂರ್ಣಿಮಾ ,ಲೆಕ್ಕಪರಿಶೋಧನೆಯ ವರದಿಯನ್ನು ಕೋಶಾಧಿಕಾರಿ ಸರೋಜಿನಿ ವಾಚಿಸಿದರು. 

 ಸಮುದಾಯ ಆರೋಗ್ಯಾಧಿಕಾರಿ ಸುಶ್ಮಿತಾ  ಎಫ್.ಎನ್.ಹೆಚ್.ಡಬ್ಲ್ಯೂ ಬಗ್ಗೆ ಮಾಹಿತಿ ನೀಡಿದರು.ಗ್ರಾ.ಪಂ.ಸದಸ್ಯರಿಗೆ ವಿಶೇಷವಾದ ಲಕ್ಕಿ ಗೇಮ್ ಸ್ಪರ್ಧೆ  ಹಾಗೂ ಸಂಘದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

 ಸಮಗ್ರ ಕೃಷಿ ಮಾಡುತ್ತಿರುವ ಸ್ನೇಹಪ್ರಿಯಾ ಸ್ತ್ರೀ ಶಕ್ತಿ ಸಂಘ  ಹಾಗೂ ಸವಣೂರು ಗ್ರಾಮ ಪಂಚಾಯತ್ ಸದಸ್ಯೆ  ಚೇತನ ಶಿವಾನಂದ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಪಂಚಾಯತ್ ನ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿ ಹಾಗೂ ಸ್ತ್ರೀಶಕ್ತಿ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು ಘಟಕದ ಸಿಬ್ಬಂದಿಗಳು, ಹಾಜರಿದ್ದರು. 

ಕೃಷಿ ಸಖಿ ಜಯಂತಿಯವರು ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು.ಮುಖ್ಯ ಪುಸ್ತಕ ಬರಹಗಾರೆ ಗೀತಾ ಜಿ.ಎಸ್ ಕಾರ್ಯಕ್ರಮ ನಿರೂಪಿಸಿ, ಪಶುಸಖಿ ಹೇಮಲತಾ  ವಂದಿಸಿದರು.ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಉಷಾ,ರೇವತಿ ಸಹಕರಿಸಿದರು.

LEAVE A REPLY

Please enter your comment!
Please enter your name here