ಪುತ್ತೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು, ಇದರ 2024-2025 ಸಾಲಿನ ಶಿಷ್ಯವೇತನಕ್ಕೆ ಶ್ರೀದೇವಿ ನೃತ್ಯರಾಧನಾ ಕಲಾ ಕೇಂದ್ರ ಪುತ್ತೂರು, ಶಾಖೆ ಬಿ.ಸಿ.ರೋಡು ಇದರ ಮೂವರು ನೃತ್ಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ನೃತ್ಯ ವಿಭಾಗದಲ್ಲಿ ಶ್ರದ್ಧಾ ಕಲ್ಲಡ್ಕ, ಶ್ರಮ ಮೆಲ್ಕಾರು, ಶ್ರಮ್ಯ ಕಲ್ಲಡ್ಕ ಆಯ್ಕೆ ಆಗಿರುತ್ತಾರೆ.
ಇವರು ನೃತ್ಯ ಗುರು ವಿದುಷಿ ರೋಹಿಣಿ ಉದಯ್ ಇವರಲ್ಲಿ ನೃತ್ಯಭ್ಯಾಸ ನಡೆಸುತ್ತಿದ್ದಾರೆ.