ಪುತ್ತೂರು: ಇತ್ತೀಚೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸನ್ಮಾನ ಕಾರ್ಯವು ಡಿ.31 ರಂದು ಸೊಸೈಟಿಯ ಸಭಾಂಗಣದಲ್ಲಿ ನೆರವೇರಿತು.
ಅವಕಾಶ ಸಿಕ್ಕಾಗ ಯಶಸ್ವಿಯಾಗಿ ಬಳಸಿಕೊಳ್ಳಿ-ಉಮಾನಾಥ್ ಶೆಟ್ಟಿ:
ಪುತ್ತೂರು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಉಮಾನಾಥ್ ಶೆಟ್ಟಿಯವರು ಸನ್ಮಾನಿತರನ್ನು ಸನ್ಮಾನಿಸಿ ಮಾತನಾಡಿ, ಬೇರೆ ಬೇರೆ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸೊಸೈಟಿಯ ಹೆಗ್ಗಳಿಕೆಯಾಗಿದೆ. ಸಮಾಜದಲ್ಲಿ ಕೆಲಸ ಮಾಡಲು ಯಾವಾಗ ಅವಕಾಶ ಸಿಗುತ್ತದೆಯೋ ಆವಾಗ ಅಂತಹ ಅವಕಾಶಗಳನ್ನು ಬಳಸಿಕೊಂಡು ದೇವಸ್ಥಾನದ ಹೆಸರನ್ನು ಹಸಿರಾಗಿಸಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಗೆ ಈಗ ಉಜ್ವಲ ಅವಕಾಶ ಸಿಕ್ಕಿದೆ. ಅಧ್ಯಕ್ಷರಾಗಿ ಆಯ್ಕೆಯಾದ ಈಶ್ವರ್ ಭಟ್‌ರವರು ಓರ್ವ ಸಹಕಾರಿಯಾಗಿ, ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವವಿದೆ. ಈ ಹಿಂದೆ ಸುಧಾಕರ್ ಶೆಟ್ಟಿಯವರು ದೇವಸ್ಥಾನದ ಅಭಿವೃದ್ಧಿಗೆ ಹೇಗೆ ದುಡಿದಿದ್ದಾರೋ ಅಂತಹ ಕೆಲಸ ಕಾರ್ಯಗಳು ಈಶ್ವರ್ ಭಟ್‌ರವರಿಂದ ಆಗಲಿ ಎಂದರು.
ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ಕೆಲಸ ಕಾರ್ಯಗಳನ್ನು ಮಾಡಲಿದ್ದೇವೆ-ಮಹಾಬಲ ರೈ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಲ್ಲೋರ್ವರಾದ, ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಮಹಾಬಲ ರೈ ಒಳತ್ತಡ್ಕ ಮಾತನಾಡಿ, ಮಂಡಲ ಪಂಚಾಯತ್ ಸದಸ್ಯರಾಗಿದ್ದ ಸಂದರ್ಭದಲ್ಲಿಯೇ ಮಹಮ್ಮದ್ ಆಲಿರವರೊಂದಿಗೆ ಕೆಲಸ ಮಾಡಿದ ಅನುಭವ ನನಗಿದೆ. ಬಾಲಾಲಯ ದೇವಸ್ಥಾನ, ಕುಂಜೂರುಪಂಜದ ದೇವಸ್ಥಾನದ ಬ್ರಹ್ಮಕಲಶೋತ್ಸವ ನನ್ನ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದಿತ್ತು. ನಾನು ಆರ್ಯಾಪು ಸೊಸೈಟಿಯ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಸೊಸೈಟಿಗೆ ನಿವೇಶನ ದಕ್ಕಿರುತ್ತದೆ. ನಿಮ್ಮೆಲ್ಲರ ಪ್ರೀತಿ, ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ಕೆಲಸ ಕಾರ್ಯಗಳು ಮಾಡಲಿದ್ದೇವೆ ಎಂದರು.
ದೇವಸ್ಥಾನ ಹಾಗೂ ಸಹಕಾರಿ ಸಂಘ ನನ್ನ ಎರಡು ಕಣ್ಣುಗಳಿದ್ದಾಗೆ-ಈಶ್ವರ್ ಭಟ್:
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ನಾನು ಕೂಡ ರೈತನಾಗಿದ್ದು ಮಾತ್ರವಲ್ಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕರಸೇವಕನಾಗಿದ್ದೇನೆ. ಇದೀಗ ದೇವಸ್ಥಾನದ ಅಧ್ಯಕ್ಷನಾಗಿರುವುದು ಸಹಕಾರಿ ಸಂಘದ ಹೆಮ್ಮೆಯಾಗಿದೆ. ರೈತ ದೇಶದ ಬೆನ್ನೆಲುಬು, ಅದೇ ರೈತನನ್ನು ಸೊಸೈಟಿಯ ಅಧ್ಯಕ್ಷ ಆಲಿರವರು ಗುರುತಿಸುವ ಕಾರ್ಯ ಮಾಡಿದ್ದಾರೆ. ಟೀಕೆಗಳು ಏನೇ ಇರಲಿ, ಕಿವಿಗೊಡದೆ ಮುಂದುವರಿಯಿರಿ ಎಂಬಂತೆ ಆಲಿರವರು ನನಗೆ ಸೂಚನೆ ನೀಡಿದ್ದು ಭಕ್ತರ ಸಲಹೆಗಳನ್ನು ಸ್ವೀಕರಿಸಿ ಎಲ್ಲರನ್ನು ವಿಶ್ವಾಸದೊಂದಿಗೆ ಕೆಲಸ ಮಾಡಲಿದ್ದೇನೆ. ದೇವಸ್ಥಾನ ಹಾಗೂ ಸಹಕಾರಿ ಸಂಘ ನನ್ನ ಎರಡು ಕಣ್ಣುಗಳಿದ್ದಾಗೆ ಎಂದರು.
ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ನಿರ್ದೇಶಕರಾದ ಕೆ.ಸದಾನಂದ ಶೆಟ್ಟಿ ಕೂರೇಲು ಆರ್ಯಾಪು, ಬಿ.ಗಣೇಶ್ ರೈ ಬಳ್ಳಮಜಲು ಕುರಿಯ, ಶೀನಪ್ಪ ಮರಿಕೆ ಆರ್ಯಾಪು, ಇಸ್ಮಾಯಿಲ್ ಮಲಾರು, ತೆರೆಜಾ ಸಿಕ್ವೇರಾ ಕೆಮ್ಮಿಂಜೆ, ಸಂಶುದ್ಧೀನ್ ನೀರ್ಕಜೆ ಆರ್ಯಾಪು, ರಂಜಿತ್ ಬಂಗೇರ ಸಂಪ್ಯ-ಆರ್ಯಾಪು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತಿ ಭಾಸ್ಕರ್ ಹಾಗೂ ಸಿಬ್ಬಂದಿಗಳಾದ ಅಜಿತ್ ಕುಮಾರ್ ರೈ, ಶುಭಾಷಿನಿ, ವಿನಯಕುಮಾರ್, ಅರ್ಜುನ್ ಭಾಸ್ಕರ್, ಪ್ರಶಾಂತಿ, ಡಿಸಿ ಬ್ಯಾಂಕ್ ದರ್ಬೆ ಶಾಖೆಯ ಪ್ರಬಂಧಕ ಕೇಶವ್, ಜಿಲ್ಲಾ ಕೇಂದ್ರ ಸಹಕಾರಿ ಸಂಘದ ಮೇಲ್ವಿಚಾರಕ ಶರತ್, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ಪವಿತ್ರ ರೈ, ಪೂರ್ಣಿಮಾ ರೈ, ಮಾಜಿ ಸದಸ್ಯರಾದ ಜಯಪ್ರಕಾಶ್ ರೈ ಕುರಿಯ, ಜಬ್ಬಾರ್ ಸಂಪ್ಯ, ವಾಲಿಬಾಲ್ ರಾಜ್ಯಮಟ್ಟದ ತರಬೇತುದಾರ ಪಿ.ವಿ ನಾರಾಯಣನ್, ನವೋದಯ ಸಂಘದ ಸದಸ್ಯರು, ಉದ್ಯಮಿ ಶಿವರಾಮ ಆಳ್ವ, ರೋಶನ್ ರೈ ಬನ್ನೂರು, ಪೂರ್ಣೇಶ್ ಭಂಡಾರಿ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ರಫೀಕ್ ಎಂ.ಕೆ, ಸುರೇಶ್ ಪೂಜಾರಿ, ಸುರೇಂದ್ರ ಮೊಟ್ಟೆತ್ತಡ್ಕ, ಕೇಶವ ಸುವರ್ಣ ಸಂಪ್ಯ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸೊಸೈಟಿ ಸಿಬ್ಬಂದಿ ಉಮೇಶ್ ಎಸ್.ಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಚಂದ್ರಕಲಾ ಓಟೆತ್ತಿಮಾರು ವಂದಿಸಿದರು.
ಮಹಾಲಿಂಗೇಶ್ವರ ದೇವರನ್ನು ಎಲ್ಲಾ ಧರ್ಮದವರು ಗೌರವಿಸುತ್ತಾರೆ…
ಸಹಕಾರಿ ರಂಗದಲ್ಲಿ ಯಾರು ಸಾಧಕರು ಇದ್ದಾರೆ ಅವರನ್ನು ಗುರುತಿಸಿ ಸನ್ಮಾನ ಮಾಡಿದ್ದೇವೆ. ಮಹಾಲಿಂಗೇಶ್ವರ ದೇವರು ಪುತ್ತೂರಿನ ದೇವರು. ಪುತ್ತೂರಿನ ಜಾತ್ರೆಯನ್ನು ನಾವೆಲ್ಲರೂ ಹಬ್ಬವನ್ನಾಗಿ ಆಚರಿಸುತ್ತೇವೆ. ಮಹಾಲಿಂಗೇಶ್ವರ ದೇವರನ್ನು ಎಲ್ಲಾ ಧರ್ಮದವರು ಗೌರವಿಸುತ್ತಾರೆ. ಯಾವುದೇ ಕಾರ್ಯಕ್ರಮದಲ್ಲಿ ರಾಜಕೀಯ ಬೆರೆಸದೆ ಸೊಸೈಟಿಯು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಈ ಬಾರಿಯ ಪುತ್ತೂರಿನ ದೇವಸ್ಥಾನದ ಸಮಿತಿ ಆಯ್ಕೆಯಲ್ಲಿ ಯಾವುದೇ ಅಪಸ್ವರವಿಲ್ಲ. ಪುತ್ತೂರಿನ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಕರು ಬರಬೇಕು ಎನ್ನುವ ಉದ್ಧೇಶದೊಂದಿಗೆ ಶಾಸಕ ಅಶೋಕ್ ರೈಯವರು ದೇವಸ್ಥಾನದ ಅಭಿವೃದ್ಧಿಗೆ ಮೆಗಾ ಪ್ಲ್ಯಾನ್ ರೂಪಿಸಿದ್ದಾರೆ. ನೂತನ ಆಡಳಿತ ಸಮಿತಿಯು ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೆ ಕೆಲಸವನ್ನು ಮಾಡಿ ತೋರಿಸಬೇಕಾಗಿದೆ.
-ಎಚ್.ಮಹಮ್ಮದ್ ಆಲಿ, ಅಧ್ಯಕ್ಷರು, ಆರ್ಯಾಪು ಕೃಷಿ ಪತ್ತಿನ ಸಹಕಾರ ಸಂಘ
ಸನ್ಮಾನ..
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಈಶ್ವರ್ ಭಟ್ ಪಂಜಿಗುಡ್ಡೆ ಹಾಗೂ ಸದಸ್ಯರಾದ ಕೃಷ್ಣವೇಣಿ, ನಳಿನಿ ರೈ, ಸುಭಾಶ್ ರೈ ಬೆಳ್ಳಿಪ್ಪಾಡಿ, ಈಶ್ವರ್ ನಾಯ್ಕ ಬೆಡೇಕರ್, ದಿನೇಶ್ ಪಿ.ವಿ, ಮಹಾಬಲ ರೈ ಒಳತ್ತಡ್ಕ, ವಿನಕುಮಾರ್‌ರವರುಗಳನ್ನು ಈ ಸಂದರ್ಭದಲ್ಲಿ ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು.