ಪುತ್ತೂರು:2025 ನೂತನ ವರ್ಷದ ಆಗಮನದ ಸಂಭ್ರಮವನ್ನು ಎಪಿಎಂಸಿ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ಹಿಂದುಗಡೆ ಹಸಿರು ಹುಲ್ಲುಹಾಸಿನ ಹೊದಿಕೆ, ಶೃಂಗಾರಮಯ ಲೈಟಿಂಗ್ಸ್ ಗಳಿಂದ, ಸುಸಜ್ಜಿತ ವೇದಿಕೆಯನ್ನೊಳಗೊಂಡ ಪುತ್ತೂರು ಗಾರ್ಡನ್‌ನಲ್ಲಿ ಡಿ.31ರಂದು ಆಚರಿಸಿದರು.
ರಂಜಿತ್ ಗೌಡರವರಿಂದ ಡಿಜೆ, ಹಾಡು, ಟೀಮ್ ಎಕ್ಸ್ಟ್ರೀಮ್ ತಂಡದಿಂದ ಡ್ಯಾನ್ಸ್, ಇಂಟರ್‌ಸ್ಟೆಲ್ಲರ್ ತಂಡದಿಂದ ಮ್ಯೂಸಿಕ್ ಬ್ಯಾಂಡ್, ಯತೀಶ್ ಶಂಭೂರ್‌ರವರ ನಿರೂಪಣೆ ಜೊತೆಗೆ ಆಗಮಿಸಿದ ಪ್ರೇಕ್ಷಕ ಬಂಧುಗಳಿಗೆ ಚರುಂಬುರಿ, ತರಕಾರಿ ಸಲಾಡ್, ಕೋಳಿ ಖಾದ್ಯಗಳ ಫುಡ್ ಫೆಸ್ಟಿವಲ್ ಹೊಸ ವರ್ಷದ ಸಂಭ್ರಮವನ್ನು ಇಮ್ಮಡಿಗೊಳಿಸಲಾಯಿತು. ಪುತ್ತೂರು ಗಾರ್ಡನ್ ಹಮ್ಮಿಕೊಂಡ ಈ ಹೊಸ ವರ್ಷದ ಸಂಭ್ರಮಕ್ಕೆ ಈಗಾಗಲೇ ಪ್ರೇಕ್ಷಕ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾತ್ರಿ 12 ಗಂಟೆ ಸಮೀಪಿಸುತ್ತಿದ್ದಂತೆಯೇ ಸ್ಥಳದಲ್ಲಿದ್ದ ಪ್ರೇಕ್ಷಕ ಸಮುದಾಯ ಕುಣಿದು ಸಂಭ್ರಮಿಸುತ್ತಾ 2025ನೇ ವರ್ಷವನ್ನು ಸ್ವಾಗತಿಸಿದರು.
ಸುಮಾರು ಸಾವಿರಕ್ಕೂ ಮಿಕ್ಕಿ ಆಸನವನ್ನೊಳಗೊಂಡ ಈ ಪುತ್ತೂರು ಗಾರ್ಡನ್‌ನಲ್ಲಿ ಈಗಾಗಲೇ ರಾತ್ರಿ ಹೊತ್ತು ಹಲವು ಕಾರ್ಯಕ್ರಮಗಳು ನಡೆದಿದ್ದು ಸೈ ಎನಿಸಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ 9448835461, 9880379608 ನಂಬರಿಗೆ ಸಂಪರ್ಕಿಸಬಹುದಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶುಭ ಸಮಾರಂಭಗಳಿಗೆ ‘ಸೈ’..
ಮದುವೆ ಹಾಗೂ ಇತರ ಶುಭ ಸಮಾರಂಭಗಳಿಗೆ ಮುಕ್ತವಾಗಿ ಸಂಭ್ರಮವನ್ನು ಆಚರಿಸಲು ಮುಕ್ತ ವೇದಿಕೆಯನ್ನು ಪುತ್ತೂರು ಗಾರ್ಡನ್ ಸಂಸ್ಥೆಯು ಕಲ್ಪಿಸಿಕೊಡುತ್ತದೆ. ಹುಲ್ಲುಹಾಸಿನ ಹೊದಿಕೆ, ಶೃಂಗಾರಮಯ ಲೈಟಿಂಗ್ಸ್ ಅನ್ನು ಪುತ್ತೂರು ಗಾರ್ಡನ್ ಒಳಗೊಂಡಿದ್ದು ಈ ನಿಟ್ಟಿನಲ್ಲಿ ಸಂಘಟಕರು ಗ್ರಾಹಕರಿಗೆ ಕೈಜೋಡಿಸುತ್ತಿದ್ದಾರೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿದ್ದು, ಇದು ಪುತ್ತೂರಿನಿಂದ ಅನತಿ ದೂರದಲ್ಲಿದೆ.