ಪುತ್ತೂರು: ಕೆದಂಬಾಡಿಗುತ್ತು ತರವಾಡಿನ ಮೂಲಸ್ಥಾನ ಧರ್ಮದೈವ ಪಿಲಿಭೂತ ದೈವಸ್ಥಾನ ಪುನರ್ ನಿರ್ಮಾಣಗೊಂಡು ಪ್ರತಿಷ್ಠೆ, ಬ್ರಹ್ಮಕಲಶ, ನೇಮೋತ್ಸವ ಜ.2ರಿಂದ ಜ.5ರ ತನಕ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಹಾಗೂ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.
ಜ.2 ರಂದು ರಾತ್ರಿ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಜ.3ರಂದು ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಪೂರ್ವಾಹ್ನ 9.36ರ ಕುಂಭ ಲಗ್ನ ಮುಹೂರ್ತದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯ ನೈಮಿತ್ತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಜ.4ರಂದು ಬೆಳಿಗ್ಗೆ ನಾಗತಂಬಿಲ, ಹರಿಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಭಂಡಾರ ತರುವುದು, ಧರ್ಮದೈವ ಪಿಲಿಭೂತ ಮತ್ತು ರಕ್ತೇಶ್ವರಿ ಕೋಲಕ್ಕೆ ಎಣ್ಣೆ ಬೂಳ್ಯ ಕೊಡುವುದು, ಗೋಂದೋಳು ಪೂಜೆ, ರಾತ್ರಿ ಅನ್ನಸಂತರ್ಪಣೆ, ಧರ್ಮದೈವ ಪಿಲಿಭೂತ ದೈವದ ಕೋಲ, ರಕ್ತೇಶ್ವರಿ ದೈವದ ಕೋಲ ನಡೆಯಲಿದೆ. ಜ.5ರಂದು ಬೆಳಿಗ್ಗೆ ಪಂಜುರ್ಲಿ, ಕಲ್ಲುರ್ಟಿ, ಗುಳಿಗ, ಬೊಟ್ಟಿ ಭೂತದ ಭಂಡಾರ ತರುವುದು, ಪಂಜುರ್ಲಿ ದೈವದ ಕೋಲಕ್ಕೆ ಎಣ್ಣೆ ಬೂಳ್ಯ ಕೊಡುವುದು., ಪಂಜುರ್ಲಿ ದೈವದ ಕೋಲ, ಮಧ್ಯಾಹ್ನ ಅನ್ನಸಂತರ್ಪಣೆ (ಗೋಂದೋಳು ಪೂಜೆಯ ಪ್ರಸಾದ ವಿತರಣೆ), ಸಂಜೆ ಗುಳಿಗ, ಕಲ್ಲುರ್ಟಿ ಹಾಗೂ ಬೊಟ್ಟಿ ಭೂತದ ಕೋಲಕ್ಕೆ ಎಣ್ಣೆ ಬೂಳ್ಯ ಕೊಡುವುದು, ಗುಳಿಗನ ಕೋಲ ಮತ್ತು ಬೊಟ್ಟಿ ಭೂತದ ಕೋಲ, ರಾತ್ರಿ ಅನ್ನಸಂತರ್ಪಣೆ, ಬಳಿಕ ಕಲ್ಲುರ್ಟಿ ಕೋಲ ನಡೆಯಲಿದೆ ಎಂದು ಕೆದಂಬಾಡಿಗುತ್ತು ಯಜಮಾನ ಶ್ರೀಧರ ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.