ವಿಟ್ಲ: ಅಳಿಕೆ ಗ್ರಾಮ ಪಂಚಾಯತ್ ನ 15ನೇ ಹಣಕಾಸು ಯೋಜನೆಯಡಿ ಮತ್ತು ಉದ್ಯೋಗ ಖಾತರಿ ಯೋಜನೆಯ ಅನುದಾನದಿಂದ ರೂ.3.5 ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಳಿಸಲಾಗಿ ಎರುoಬು – ಎರುoಬು ಶಂಕರ ನಾರಾಯಣ ದೇವಸ್ಥಾನ ರಸ್ತೆಯನ್ನು ಹಾಗೂ ಎರುoಬು ವಿಷ್ಣುಮೂರ್ತಿ ದೇವಸ್ಥಾನದಿನ ಬಳಿ ಗ್ರಾಮ ಪಂಚಾಯತ್ ನಿಂದ ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಳಿಕೆ ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ಶೆಟ್ಟಿ, ಸೀತಾರಾಮ ಶೆಟ್ಟಿ, ಸದಾಶಿವ ಶೆಟ್ಟಿ, ಸುಕುಮಾರ. ಎಮ್, ಭಾಗೀರಥಿ, ಶಾಂಭವಿ, ಗ್ರಾಮಸ್ಥರಾದ ಬಾಲಕೃಷ್ಣ ಕಾರಾಂತ ಎರುoಬು, ಗೋಪಾಲ ಮಣಿಯಾನಿ, ಜಯರಾಮ ಎರುoಬು, ವಸಂತ, ಮೋಹನದಾಸ ರೈ ಎರುoಬು, ಸದಾಶಿವ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ರಾಮಚಂದ್ರ ಬಲ್ಲಾಳ್, ಸುರೇಶ ಮಡಿಯಾಲ, ವಿನಯ ರೈ, ಸವಿತಾ, ತುಳಸಿ ಮುಳಿಯ, ಗೀತಾ ಮುಳಿಯ, ಸುನೀತಾ, ಕೀರ್ತನ್ ಸಣ್ಣಗುತ್ತು ಮೊದಲಾದವರು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯರಾದ ಸದಾಶಿವ ಶೆಟ್ಟಿ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿಯಾದ ಧನಂಜಯ ರವರು ವಂದಿಸಿದರು.