ಪುತ್ತೂರು: ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕು ಸಮಿತಿ ಸದಸ್ಯರೊಬ್ಬರಿಗೆ ವ್ಯಕ್ತಿಯೊಬ್ಬರು ಬೆದರಿಕೆ ಕರೆ ಮಾಡಿದ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.
ಹಿಂದು ಜಾಗರಣ ವೇದಿಕೆ ತಾಲೂಕು ಸಮಿತಿ ಸದಸ್ಯ ನರಿಮೊಗರು ಗ್ರಾಮದ ಮುಕ್ವೆ ನಿವಾಸಿ ಸುಭಾಷ್ ರೈ ಅವರು ದೂರುದಾರರಾಗಿದ್ದು, ಅವರಿಗೆ ಮುಂಡೂರು ಗ್ರಾಮದ ಧನಂಜಯ ಕಲ್ಲಮ್ಮ ಎಂಬವರು ಬೆದರಿಕೆ ಕರೆ ಮಾಡಿರುವುದಾಗಿ ದೂರು ನೀಡಲಾಗಿದೆ.
’ಮೊಬೈಲ್ ನಂಬ್ರಕ್ಕೆ ಧನಂಜಯ ಅವರು ಬೆದರಿಕೆ ಕರೆ ಮಾಡಿದಲ್ಲದೆ ಇತರರಿಗೆ ಮೊಬೈಲ್ ನಂಬರ್ ಕೊಟ್ಟು ಬೆದರಿಕೆ ಒಡ್ಡುವಂತೆ ಪ್ರೇರೇಪಿಸಿದ್ದಾರೆ. ಅದರಿಂದಾಗಿ ಅನೇಕ ಕರೆಗಳು ಬರುತ್ತಿವೆ. ಬೆದರಿಕೆ ಕರೆಯಿಂದಾಗಿ ಮುಂದೆ ಆಗಬಹುದಾದ ತೊಂದರೆಯನ್ನು ನಿವಾರಿಸಿ ಸೂಕ್ತ ರಕ್ಷಣೆ ನೀಡುವಂತೆ’ ಸುಭಾಷ್ ರೈ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.