ಪುಣಚ: ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರದಲ್ಲಿ ಶಿಶುಮಂದಿರದ ನೂತನ ಕಟ್ಟಡ ಉದ್ಘಾಟನೆ ಹಾಗೂ 2024-25ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಜ.3ರಂದು ನಡೆಯಲಿದೆ.
ಸಾಯಂಕಾಲ ಗಂಟೆ 5ರಿಂದ ದೀಪ ಪ್ರಜ್ವಲನೆ, ಪ್ರಾರ್ಥನೆ ನಡೆದು ಶ್ರೀದೇವಿ ಅಂಗನವಾಡಿ, ಶಿಶುಮಂದಿರದ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಶ್ರೀದೇವಿ ಶಿಶುಮಂದಿರದ ನೂತನ ಕಟ್ಟಡ ಉದ್ಘಾಟನೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾI ಕೆ.ಪ್ರಭಾಕರ್ ಭಟ್ ಕಲ್ಲಡ್ಕ ಉದ್ಘಾಟಿಸಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ನರನ್ಸ್ ಸಮೂಹ ಸಂಸ್ಥೆಗಳ ಮಾಲಕ ರಾಮ್ ಭಟ್ ನಿಡ್ಲೆ ಸಭಾಧ್ಯಕ್ಷತೆ ವಹಿಸಲಿದ್ದು, ಮಂಗಳೂರು ಉದ್ಯಮಿ ಜಿತೇಂದ್ರ ಕೊಟ್ಟಾರಿ, ವಿಟ್ಲ ಗ್ರಾಮೀಣ ಬ್ಯಾಂಕ್’ನ ಅಧ್ಯಕ್ಷ ಜಗನ್ನಾಥ ಸಾಲಿಯಾನ್, ನ್ಯಾಯವಾದಿ ರತ್ನಾಕರ ಶೆಟ್ಟಿ ಕೆ, ಪುತ್ತೂರು ಮಾಸ್ಟರ್ ಪ್ಲಾನರಿಯ ಅಕ್ಷಯ ಎಸ್.ಕೆ, ಪುತ್ತೂರು ನಗರಸಭಾ ಮಾಜಿ ಉಪಾಧ್ಯಕ್ಷೆ, ವಿವೇಕಾನಂದ ತಾಂತ್ರಿಕ ವಿದ್ಯಾಲಯದ ನಿರ್ದೇಶಕಿ ವಿದ್ಯಾ ಆರ್.ಗೌರಿ, ಪುತ್ತೂರು ಜಯಂತಿ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಲಿರುವರು. ಬಳಿಕ ಭೋಜನ ನಡೆದು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿರುವುದು ಎಂದು ಶಾಲಾ ಆಡಳಿತ ಸಮಿತಿ, ಮುಖ್ಯ ಗುರಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.