ನೆಲ್ಯಾಡಿ: ಇಲ್ಲಿನ ಶಿಲ್ಪಾ ಅರ್ಕೆಡ್‌ನಲ್ಲಿ ಶಕ್ತಿ ಎಂಟರ್‌ಪ್ರೈಸಸ್ ಮತ್ತು ಹಾರ್ಡ್‌ವೇರ್ ಮಳಿಗೆ ಜ.1ರಂದು ಶುಭಾರಂಭಗೊಂಡಿತು.
ದೋಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾದ ಪದ್ಮನಾಭ ನೂಜಿನ್ನಾಯ ಅವರು ಪೂಜಾ ವಿಧಿವಿಧಾನ ನೆರವೇರಿಸಿ ದೀಪ ಪ್ರಜ್ವಲಿಸಿದರು.
ಈ ಸಂದರ್ಭದಲ್ಲಿ ಶಿಲ್ಪಾ ಕಾಂಪ್ಲೆಕ್ಸ್‌ನ ಮಾಲಕರಾದ ಶಿವಣ್ಣ ಪಿ.ಹೆಗ್ಡೆ, ಶ್ಯಾಮಲಾ ಹೆಗ್ಡೆ, ಶೈಲೇಶ್ ಹೆಗ್ಡೆ, ನೆಲ್ಯಾಡಿಯ ವರ್ತಕರು, ಊರಿನ ಪ್ರಮುಖರು, ಮಾಲಕರ ಹಿತೈಷಿಗಳು ಆಗಮಿಸಿ ನೂತನ ಮಳಿಗೆಗೆ ಶುಭಾಶಯ ಕೋರಿದರು.
ಮಾಲಕ ಕುಮಾರೇಂದ್ರ ರೈ ಅವರು ಅತಿಥಿಗಳನ್ನು ಬರಮಾಡಿಕೊಂಡು ನಮ್ಮಲ್ಲಿ ಹಾರ್ಡ್‌ವೇರ್ ಐಟಮ್ಸ್, ಪಿವಿಸಿ ಮತ್ತು ಯುಪಿವಿಸಿ ಪೈಪ್ಸ್ ಮತ್ತು ಫಿಟ್ಟಿಂಗ್, ಸೋಲಾರ್ ಬ್ಯಾಟರಿ ಮತ್ತು ಇನ್‌ವರ್ಟರ್‌ಗಳು ಲಭ್ಯವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು. ಮಾಲಕ ಕುಮಾರೇಂದ್ರ ರೈ ಅವರ ಪತ್ನಿ ಸೌಮ್ಯಲತಾ, ಮಕ್ಕಳಾದ ಶುಕ್ತಿಜ್, ಶೃತಿಕ್, ಸಹೋದರರಾದ ಲೋಕೇಶ್ ರೈ, ಪುರಂದರ ರೈ, ಮನೋಹರ ರೈ, ಬಾವ ಅರುಣ್ ರೈ, ಮಾವ ರಾಮಯ್ಯ ರೈ ಮತ್ತಿತರರು ಉಪಸ್ಥಿತರಿದ್ದರು.