ಪುತ್ತೂರು: ಪ್ರತಿಷ್ಠಿತ ತಂಪು ಪಾನೀಯ ತಯಾರಿಕ ಸಂಸ್ಥೆಯಾಗಿರುವ ಬಿಂದು ಫ್ಯಾಕ್ಟರಿಯ ಎಲ್ಲಾ ಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ದೊರೆಯುವ 19ನೇ ಬಿಂದು ಫ್ಯಾಕ್ಟರಿ ಔಟ್‌ಲೆಟ್ ಡಿ.26 ರಂದು ಸ್ಟಾಲ್ ನಂಬರ್ 5, ದ್ವಾರಕಾ ಬಸ್ ಸ್ಟೇಷನ್, ವಿಶಾಖಪಟ್ಟಣಮ್ ನಲ್ಲಿ ಶುಭಾರಂಭಗೊಂಡಿತು.
ವಿಶಾಖಪಟ್ಟಣಮ್‌ನ ಡೆಪ್ಯೂಟಿ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಅಧಿಕಾರಿ ಬಿ. ಅಪ್ಪಾಲ ನಾಯ್ಡು ಔಟ್‌ಲೆಟ್‌ನ್ನು ಉದ್ಘಾಟಿಸಿದರು.
ಮೇಘಾ ಫ್ರೂಟ್ ಪ್ರೋಸೆಸ್ಸಿಂಗ್ ಪ್ರೈ.ಲಿ., ಬಿಸಿನೆಸ್ ಹೆಡ್ ದೇವರಾಜ್, ಅಂಧ್ರ ಪ್ರದೇಶ ರಾಜ್ಯ ಮುಖ್ಯಸ್ಥರಾದ ಶಿವರಾಮ ಪ್ರಸಾದ್, ಸುಬ್ಬುರಾಯ ಹಾಗೂ ನಾಗೇಶ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಗ್ರಾಹಕರ ನೆಚ್ಚಿನ ಸ್ವದೇಶಿ ಭಾರತೀಯ ಶೈಲಿಯ ತಿನಿಸು ಮತ್ತು ಪಾನೀಯಗಳು ಒಂದೇ ಸೂರಿನಡಿ ಲಭ್ಯವಿದ್ದು, ಸಂಸ್ಥೆಯು ಪುತ್ತೂರು ತಾಲೂಕು ನರಿಮೊಗರುನಲ್ಲಿ 2000 ರಿಂದ ಸ್ಥಳೀಯ ಜನರಿಗೆ ಉದ್ಯೋಗ ದೃಷ್ಟಿಯಿಂದ ಸ್ಥಾಪನೆಗೊಂಡಿದ್ದು, ’ಬಿಂದು’ ಬ್ರಾಂಡ್ ಉತ್ಪನ್ನಗಳಾದ ಸಂಸ್ಕರಿಸಲ್ಪಟ್ಟ ನೀರು, ಸೋಡಾ ಮತ್ತು ಏರೇಟೆಡ್ ಪಾನೀಯಗಳು ’ಸಿಪ್ ಆನ್’ ಬ್ರಾಂಡ್‌ನ ಫಿಝ್ ರಹಿತವಾದ ಹಣ್ಣಿನ ಮೂಲದ ಪಾನೀಯ, ’ಫ್ರುಃಝೆನ್’ ಬ್ರಾಂಡ್‌ನ ಫಿಝ್ ಸಹಿತವಾದ ಹಣ್ಣಿನ ಮೂಲದ ಪಾನೀಯ, ’ಸ್ನಾಕ್ ಆಪ್’ ಬ್ರಾಂಡ್‌ನ ಸ್ನಾಕ್ಸ್, ಕುರುಕಲು ಚಿಪ್ಸ್ ಇತ್ಯಾದಿ, ಸುಮಾರು 50ಕ್ಕೂ ಹೆಚ್ಚು ಸ್ವದೇಶಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು ದಕ್ಷಿಣ ಭಾರತದಾದ್ಯಂತ ಸುಮಾರು 5ಲಕ್ಷ ಕ್ಕಿಂತಲೂ ಹೆಚ್ಚು ಮಳಿಗಳಲ್ಲಿ ’ಬಿಂದು’ ಉತ್ಪನ್ನಗಳು ದೊರಕುತ್ತಿದೆ.
ಬಿಂದು ಫ್ಯಾಕ್ಟರಿ ಔಟ್‌ಲೆಟ್ ಮೂಲಕ ಫ್ಯಾಕ್ಟರಿಯ ಎಲ್ಲಾ ಉತ್ಪನ್ನಗಳನ್ನು ಒಂದೇ ಸೂರಿನಡಿ ವಿತರಿಸುವ ಯೋಜನೆ ಹಮ್ಮಿಕೊಂಡಿದೆ.
ಈ ಆರ್ಥಿಕ ವರ್ಷದಲ್ಲಿ 50 ಪ್ಯಾಕ್ಟರಿ ಔಟ್‌ಲೆಟ್‌ಗಳನ್ನು ಹಾಗೂ ಮುಂಬರುವ 5 ವರ್ಷಗಳಲ್ಲಿ 500 ಫ್ಯಾಕ್ಟರಿ ಔಟ್ಲೆಟ್‌ಗಳನ್ನು ಆರಂಭಿಸುವ ಯೋಜನೆಯನ್ನು ಹೊಂದಿದೆ.