ಪುತ್ತೂರು: ಮೊಟ್ಟೆತಡ್ಕ ನಿವಾಸಿ ಅರ್ಹ ಫಲಾನುಭವಿಗೆ ರೋಟರಾಕ್ಟ್ ಕ್ಲಬ್ ಪುತ್ತೂರು ವತಿಯಿಂದ ಸುಲಭವಾಗಿ ಚಲಿಸಲು ಗಾಲಿ ಕುರ್ಚಿಯನ್ನು ವಿತರಿಸಲಾಯಿತು.
ಗಾಲಿ ಕುರ್ಚಿಯ ಕೊಡುಗೆಯನ್ನು ಮಾಸ್ಟರ್ ಪ್ಲಾನರಿಯ ಸಿಬ್ಬಂದಿ ಅನಿರುದ್ದ್ ನೀಡಿದರು. ರೋಟರಾಕ್ಟ್ ಕ್ಲಬ್ ಸಭಾಪತಿ ಶ್ರೀಧರ್ ಆಚಾರ್ಯ, ಕ್ಲಬ್ ಅಧ್ಯಕ್ಷ ಸುಬ್ರಮಣಿ ಪಿ ವಿ, ಕಾರ್ಯದರ್ಶಿ ವಿಶಾಲ್, ಸದಸ್ಯರಾದ ಕಿಶೋರ್ ಹಾಗೂ ಮುರಳಿ ಉಪಸ್ಥಿತರಿದ್ದರು.