ಆಲಂಕಾರು:ಸೀಮಾ ದೇವಸ್ಥಾನ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು ಇದೀಗ 19 ಜನ ಸದಸ್ಯರನ್ನೊಳಗೊಂಡ
ಅಭಿವೃದ್ಧಿ/ಜೀರ್ಣೋದ್ಧಾರ ಸಮಿತಿ 3 ವರ್ಷಗಳ ಅವಧಿಗೆ ಹಿಂದೂ ಆಯುಕ್ತರು ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಅದೇಶಿಸಿದೆ.
ಅಧ್ಯಕ್ಷರಾಗಿ ಪೆರಾಬೆ ಗ್ರಾಮದ ಮನವಳಿಕೆಗುತ್ತು ಹೇಮಂತ್ ರೈ,ಪದನಿಮಿತ್ತ ಸದಸ್ಯರಾಗಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ನಗ್ರಿ,ಕಾರ್ಯದರ್ಶಿ ಮತ್ತು ಖಚಾಂಚಿ ಯಾಗಿ ಕಡಬ ಉಪತಹೀಲ್ದಾರರು,ಪದನಿಮಿತ್ತ ಸದಸ್ಯರಾಗಿ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಧಾಕೃಷ್ಣ ರೈ ಪರಾರಿಗುತ್ತು, ಪುಷ್ಪಲತಾ,ಆರ್ಚಕರಾದ ಹರಿಪ್ರಸಾದ್ ಉಪಾಧ್ಯಾಯ, ಸದಸ್ಯರಾಗಿ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ವಿಠಲ ರೈ ರೈ ನಿವಾಸ ಆಲಂಕಾರು,ಗಣೇಶ ಹಿರಿಂಜ ಹಳೇನೆರೆಂಕಿ,ವಸಂತ ಕುಂಟ್ಯಾನ ಪೆರಾಬೆ ಗ್ರಾಮ,ಜನಾರ್ಧನ ಕುಂಬಾರ ನಾಡ್ತಿಲ ಆಲಂಕಾರು ಗ್ರಾಮ,ವಿಜಯ ಕುಮಾರ್ ಕೆದಿಲ ಆಲಂಕಾರು ಪೆರಾಬೆ, ಗುರುರಾಜ್ ಕೇವಳ ಕುಂತೂರು ಗ್ರಾಮ,ಗುರುಪ್ರಸಾದ್ ಆಲೆಕ್ಕಿ ಆಲಂಕಾರು, ಕುಂಞ ಮಗೇರ ಕಮ್ಮಿತ್ತಿಲು ಆಲಂಕಾರು, ಕೇಶವ ಗೌಡ ಆಲಡ್ಕ,ಆಲಂಕಾರು ಗ್ರಾಮ,ಭಾಸ್ಕರ ಇಡಾಳ ಪೆರಾಬೆ ಗ್ರಾಮ,ಸದಾನಂದ ಕುಮಾರ್ ಮಡ್ಯೊಟ್ಟು,ಆಲಂಕಾರು ಗ್ರಾಮ,ಗಂಗಾಧರ ಶೆಟ್ಟಿ ಬಲ್ಯ ಹೊಸೊಕ್ಲು ರಾಮನಗರ,ನೆಲ್ಯಾಡಿ ರವರನ್ನು ಜೀರ್ಣೋದ್ಧಾರ ಸಮಿತಿಗೆ ಆಯ್ಕೆಯಾಗಿದ್ದಾರೆ.