





ಪುತ್ತೂರು: ಪುತ್ತೂರು ನೆಹರೂ ನಗರದ ಅಶ್ವಿನಿ ಕಾಂಪ್ಲೆಕ್ಸ್ ನಲ್ಲಿ ಕಳೆದ 15ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಗಣೇಶ್ ಮೆಡಿಕಲ್ಸ್ ಮತ್ತು ಜನರಲ್ ಸ್ಟೋರ್ಸ್ ಸಂಪ್ಯದ ಕಾವೇರಿ ಕಾಂಪ್ಲೆಕ್ಸ್’ಗೆ ಸ್ಥಳಾಂತರಗೊಂಡು ಜ.3ರಂದು ಶುಭಾರಂಭಗೊಂಡಿತು.


ಬೆಳಿಗ್ಗೆ ರಾಮ ಪ್ರಸಾದ್ ಕಲ್ಲರ್ಪೆಯವರ ಪೌರೋಹಿತ್ಯದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿತು.





ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ದೀಪ ಬೆಳಗಿಸಿ ಉದ್ಘಾಟಿಸಿ ಆರೋಗ್ಯ ಸರಿಯಾಗಿದ್ದರೆ ಮಾತ್ರ ನಾವು ಸಮಾಜದಲ್ಲಿ ಬದುಕಲು ಸಾಧ್ಯ. ಈ ಭಾಗದಲ್ಲಿ ಔಷಧೀಯ ಮಳಿಗೆ ಆರಂಭಗೊಂಡಿರುವುದು ನಮ್ಮೆಲ್ಲರ ಸೌಭಾಗ್ಯ. ಜನರಿಗೆ ಒಳ್ಳೆಯ ಆರೋಗ್ಯ ಸೇವೆ ನೀಡುತ್ತಾ ಸಂಸ್ಥೆ ಬೆಳೆಯಲಿ ಎಂದರು.
ಪುತ್ತೂರು ಅಕ್ಷಯ ಕಾಲೇಜು ಸಂಚಾಲಕ, ಉದ್ಯಮಿ ಜಯಂತ ನಡುಬೈಲು ಮಾತನಾಡಿ, ಬೆಳೆಯುತ್ತಿರುವ ನಗರದ ಜನರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಎಂದರು. ನೆಹರೂನಗರ ಸಂಜೀವಿನಿ ಕ್ಲಿನಿಕ್’ನ ಡಾ. ರವಿನಾರಾಯಣ, ಕಟ್ಟಡ ಮಾಲಕ ಭೀಮಯ್ಯ ಭಟ್ ಶುಭಹಾರೈಸಿದರು.

ತಿರುಮಲೇಶ್ವರ ಭಟ್ ಕುರಿಯಾಜೆ, ಉದಯ ಶಂಕರ ಭಟ್ ಕುರಿಯಾಜೆ, ಶಂಕರಿ ಭಟ್ ಕಲ್ಲರ್ಪೆ ಸೇರಿದಂತೆ ಹಲವಾರು ಗಣ್ಯರು, ಮಿತ್ರರು, ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.
ಮಾಲಕರ ಸಹೋದರರಾದ ಗೋಪಾಲಕೃಷ್ಣ ಭಟ್, ಸುಬ್ರಹ್ಮಣ್ಯ ಭಟ್, ಮಹಾಬಲೇಶ್ವರ ಭಟ್, ಗಣಪತಿ ಭಟ್ ಹಾಗೂ ಸಸಿಹಿತ್ಲು ಮನೆಯವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಶಂಕರನಾರಾಯಣ ಭಟ್ ಮಲಾರ್-ನೆಕ್ಕರೆ, ಅವರ ಪತ್ನಿ ಪುಷ್ಪಲತಾ ಭಟ್, ಪುತ್ರಿಯರಾದ ಶ್ರೇಯಾ ಎಸ್, ಧ್ಯೇಯಾ ಎಸ್ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.







