ಪುತ್ತೂರು:ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ಎಲ್ಲಾ 12 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಒಟ್ಟು 12 ನಿದೇಶಕ ಸ್ಥಾನಗಳಿಗೆ 27 ನಾಮಪತ್ರಗಳು ಸಲ್ಲಿಕೆಯಾಗಿತ್ತು. ಈ ಪೈಕಿ 15 ಮಂದಿ ನಾಮಪತ್ರ ಹಿಂತೆಗೆದುಕೊಂಡಿದ್ದು ಉಳಿದ 12 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಸ್ಥಾನದಿಂದ ಹಾಲಿ ಅಧ್ಯಕ್ಷ ಸತೀಶ್ ಗೌಡ ಒಳಗುಡ್ಡೆ, ಹಾಲಿ ನಿರ್ದೇಶಕರಾದ ಪ್ರವೀಣ್‌ಚಂದ್ರ ಆಳ್ವ ಮುಂಡೇಲು, ಪ್ರಕಾಶಚಂದ್ರ ಆಳ್ವ ಮುಂಡೇಲು, ಚಂದಪ್ಪ ಪೂಜಾರಿ ಕಾಡ್ಲ, ಹಿಂದುಳಿದ ವರ್ಗ ‘ಎ’ಸ್ಥಾನದಿಂದ ನವೀನ್ ಕರ್ಕೆರಾ ರಾಂಬೈಲು ಉಜ್ರುಪಾದೆ, ಹಿಂದುಳಿದ ವರ್ಗ ‘ಬಿ’ಸ್ಥಾನದಿಂದ ಅಂಬ್ರೋಸ್ ಡಿ’ಸೋಜ ಅಗರ್ತಬೈಲು, ಪರಿಶಿಷ್ಟ ಜಾತಿ ಸ್ಥಾನದಿಂದ ಸುರೇಶ್ ಎನ್ ನಾರಾಜಿರಮೂಲೆ ಪುನರಾಯ್ಕೆಯಾಗಿದ್ದಾರೆ.
ಸಾಮಾನ್ಯ ಸ್ಥಾನದಿಂದ ಮಹಮ್ಮದ್ ಶರೀಫ್ ಬೆಳಿಯೂರುಕಟ್ಟೆ, ಮಹಿಳಾ ಸ್ಥಾನದಿಂದ ಸುಜಾತ ರಂಜನ್ ರೈ ಬೀಡು, ಪ್ರಮೀಳಾ ಚಂದ್ರಶೇಖರ ಗೌಡ ಬ್ರಹ್ಮರಕೋಡಿ ಉಜ್ರುಪಾದೆ, ಪರಿಶಿಷ್ಟ ಪಂಗಡ ಸ್ಥಾನದಿಂದ ನಾರಾಯಣ ಬಿ. ಬಂಗಾರಡ್ಕ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ದಿನೇಶ ಕಾಣದಗುಳಿ ಉಜ್ರುಪಾದೆ ಇವರು ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್ ಚುನಾವಣಾಧಿಕಾರಿಯಾಗಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶುಭ ಕೆ. ಹಾಗೂ ಸಿಬಂದಿಗಳು ಸಹಕರಿಸಿದರು.
ಸ್ಥಾನ ಹಂಚಿಕೊಂಡ ಕಾಂಗ್ರೆಸ್, ಸಹಕಾರ ಭಾರತಿ:
ಸಂಘದಲ್ಲಿ ಈ ಹಿಂದೆ ಎಲ್ಲಾ 12 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾಗಿದ್ದರು. ಈ ಬಾರಿ ಕಾಂಗ್ರೆಸ್ ಹಾಗೂ ಸಹಕಾರ ಭಾರತಿ ಸ್ಥಾನ ಹಂಚಿಕೊಂಡಿದ್ದು 12 ಸ್ಥಾನಗಳಲ್ಲಿ 10 ಸ್ಥಾನ ಕಾಂಗ್ರೆಸ್ ಹಾಗೂ 2 ಸ್ಥಾನಗಳನ್ನು ಸಹಕಾರಿ ಭಾರತಿಗೆ ಬಿಟ್ಟುಕೊಡುವ ಮೂಲಕ ಸ್ಥಾನ ಹಂಚಿಕೊಂಡಿದೆ. ಸಹಕಾರ ಭಾರತಿಯ ಮಹಿಳಾ ಸ್ಥಾನದಿಂದ ಆಯ್ಕೆಯಾದ ಸುಜಾತ ರಂಜಿನ್ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ದಿನೇಶ್ ಆಯ್ಕೆಯಾಗಿದ್ದಾರೆ.