ಪುತ್ತೂರು:ಒಕ್ಕಲಿಗ ಗೌಡ ಸೇವಾ ಸಂಘ ಇದರ ವತಿಯಿಂದ ಸಹ ಸಂಸ್ಥೆಗಳ ಸಹಯೋಗದೊಂದಿಗೆ ಜ.4 ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಇದರ ದಶಮಾನೋತ್ಸವ ಸಂಭ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಆದಿಚುಂಚನಗಿರಿ ಸಂಸ್ಥಾನದ ಪೀಠಾಧಿಪತಿ ಡಾ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ನಾವು ಇವತ್ತು ಬಂದಿರುವುದು ಬೇಗ ಆಗಿದೆ. ಇನ್ನು ಒಂದು ಗಂಟೆಯೊಳಗೆ ಸಭಾಂಗಣದ ಹೊರಗೆ ಮತ್ತು ಒಳಗೆ ಭಕ್ತ ಸಮೂಹದಿಂದ ತುಂಬಲಿದೆ ಎಂದು ಹೇಳಿದ ಒಂದು ಗಂಟೆಯೊಳಗೆ ಸಭಾಂಗಣದ ಒಳಗೆ ಮತ್ತು ಹೊರಗೆ ಸಭಾಂಗಣ ತುಂಬಿ ತುಳುಕಿದ ಪ್ರಸಂಗ ನಡೆಯಿತು.
ಶ್ರೀಗಳು ಆರಂಭದಲ್ಲಿ ಮಾತನಾಡಿ, ಮಂಗಳೂರು ಶಾಖಾ ಮಠಕ್ಕೆ ಬರುವಂತಹ ವ್ಯಾಪ್ತಿಯಲ್ಲಿ ಬಹಳ ಕಾರ್ಯಕ್ರಮ ಆಗಿದೆ. ಅದರಲ್ಲೂ ಹೆಚ್ಚು ಇಷ್ಟಪಟ್ಟು ಆಗಿರುವ ಕಾರ್ಯಕ್ರಮ ಪುತ್ತೂರಿನ ಈ ಸಮಯದಾಯ ಭವನದಲ್ಲಿ ಅನ್ನುವಂತಹದ್ದು ತುಂಬಾ ಸಂತೋಷ ಕೊಡುವಂತಹದ್ದು. ಸದಾ ಕಾಲದಲ್ಲೂ ತುಂಬಿ ಕಿಕ್ಕಿರಿದು ಇರುವ ಜನ, ಭಕ್ತಸ್ತೋಮ ಇವತ್ತು ಸ್ವಲ್ಪ ಚಯರ್ ಖಾಲಿ ಇದೆ ಎಂಬುದಕ್ಕೆ ಬೇಸರ ಮಾಡಬೇಡಿ. ಯಾಕೆಂದರೆ ನಾವು ಬಂದಿರಯವುದು ಬೇಗ. ಇನ್ನು ಒಂದು ಗಂಟೆಯೊಳಗೆ ಸಭಾಂಗಣ ಒಳಗಡೆ ಹೊರಗಡೆ ಸಾವಿರಾರು ಮಂದಿ ಭಕ್ತರಿಂದ ತುಂಬಿ ತುಳುಕಲಿದೆ ಎಂಬ ಮಾತನ್ನು ಹೇಳಿದ್ದರು.ಅವರು ಹೇಳಿದಂತೆ ಒಂದು ಗಂಟೆಯೊಳಗೆ ಸಭಾಂಗಣದ ಒಳಗೆ ಹೊರಗೆ ಜನಸ್ತೋಮ ತುಂಬಿತುಳುಕಿದೆ.