ಪುತ್ತೂರು: ಮುಕ್ರಂಪಾಡಿಯಲ್ಲಿರುವ ಆಯುರ್ ಬ್ಯೂಟಿ ಸೆಂಟರ್ ತನ್ನ ಹನ್ನೊರಡನೆಯ ವರುಷದ ನೆನಪಿಗಾಗಿ ಮತ್ತು ಉತ್ತಮ ಗುಣಮಟ್ಟದ ಅಂತರಾಷ್ಟ್ರೀಯ ಉತ್ಪನ್ನಗಳ ಅಲಂಕಾರಿಕ ತರಬೇತಿಯನ್ನು ಮುಂಬಯಿ ಹಾಗೂ ಬೆಂಗಳೂರಿನಲ್ಲಿ ಪಡೆದ ಸವಿನೆನಪಿಗಾಗಿ ಅಸಹಾಯಕ ಹೆಣ್ಣು ಮಕ್ಕಳಿಗೆ ಬೇಸಿಕ್ ಮೇಕಪ್ ಕುರಿತು ಹತ್ತು ದಿನದ ಉಚಿತ ತರಬೇತಿ ಕಾರ್ಯಾಗಾರ ಜನವರಿ 18ರಿಂದ 28ರವರೆಗೆ ಹಮ್ಮಿಕೊಂಡಿದೆ.
ತರಬೇತಿಯಲ್ಲಿ ಭಾಗವಹಿಸಲು ಇಚ್ಛಿಸುವ ಬಡತನ ರೇಖೆಗಿಂತ ಕೆಳಗಿನ ಹಾಗೂ ಸಂಕಷ್ಟದಲ್ಲಿರುವ ಹೆಣ್ಣು ಮಕ್ಕಳು ತಮ್ಮ ವಿವರ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಸಹಿತ ಸಂಸ್ಥೆಯನ್ನು ಸಂಪರ್ಕಿಸಬಹುದು.
ಹೆಸರು ನೋಂದಾಯಿಸಲು ಜನವರಿ 15 ಕೊನೆಯ ದಿನವಾಗಿರುತ್ತದೆ.
ಕೇವಲ ಹತ್ತು ದಿನದ ತರಬೇತಿಯಲ್ಲಿ ಮುಖ್ಯ ವಿಷಯಗಳ ಬಗ್ಗೆ ಮಾಹಿತಿ ಹಾಗೂ ನೋಟ್ಸ್ ಕೊಡಲಾಗುವುದು ಎಂದು ಆಯುರ್ ಬ್ಯೂಟಿ ಸೆಂಟರ್ ಮಾಲಕಿ ವಸಂತಲಕ್ಷ್ಮಿ ತಿಳಿಸಿದ್ದಾರೆ.