ಅಧ್ಯಕ್ಷ: ಪುಷ್ಪರಾಜ್ ಶೆಟ್ಟಿ ಬೈರಮಜಲು, ಕಾರ್ಯದರ್ಶಿ: ಶ್ರೀಕುಮಾರ್ ಆಡ್ಯೆತ್ತಿಮಾರ್
ಪುತ್ತೂರು: ಬೆಟ್ಟಂಪಾಡಿ ಬಿಜೆಪಿ ಶಕ್ತಿಕೇಂದ್ರದ 168ರ ಬೂತ್ ಸಮಿತಿಯ ಅಧ್ಯಕ್ಷರಾಗಿ ಪುಷ್ಪರಾಜ್ ಶೆಟ್ಟಿ ಬೈರಮಜಲು, ಕಾರ್ಯದರ್ಶಿಯಾಗಿ ಶ್ರೀಕುಮಾರ್ ಆಡ್ಯೆತ್ತಿಮಾರ್‌ರವರನ್ನು ಆಯ್ಕೆ ಮಾಡಲಾಯಿತು.
ಲಾಭರ್ತಿ ಪ್ರಮುಖರಾಗಿ ಅಚ್ಚುತ ಭಟ್ ಕಕ್ಕೂರು, ಮನ್ ಕಿ ಬಾತ್ ಪ್ರಮುಖರಾಗಿ ಅಶ್ಮಿತ್ ಕಕ್ಕೂರು, ಸಾಮಾಜಿಕ ಜಾಲತಾಣ ಪ್ರಮುಖರಾಗಿ ಧನ್ಯರಾಜ್ ಬಿ. ಇರ್ದೆ, ಬಿಎಲ್‌ಎ-2 ಆಗಿ ಜಯಪ್ರಕಾಶ್ ಕಕ್ಕೂರು, ಹಾಗೂ ಸದಸ್ಯರುಗಳಾಗಿ ಸಂಜೀವ ಗುಂಡ್ಯಡ್ಕ, ರಘುರಾಮ ಪಾಟಾಳಿ, ಅನಿತಾ ಕುವೆಂಜ, ಯಶೋಧ ಹರೀಶ್, ಪುರಂದರ ಕುಲಾಲ್, ಸರೋಜ ರೈ ಅರಂತನಡ್ಕರವರನ್ನು ಆಯ್ಕೆ ಮಾಡಲಾಯಿತು. ಬಿಜೆಪಿ ಮುಖಂಡರಾದ ರಂಗನಾಥ ರೈ ಗುತ್ತು, ಜಗನ್ನಾಥ ರೈ ಕೊಮ್ಮಂಡ, ವಿನೋದ್ ಕುಮಾರ್ ರೈ ಗುತ್ತು, ಶಕ್ತಿಕೇಂದ್ರದ ಅಧ್ಯಕ್ಷ ಸಂದೀಪ್ ರೈ ಬಾಜುವಳ್ಳಿ ಸಹಿತ ಹಲವರು ಉಪಸ್ಥಿತರಿದ್ದರು.