ಪುತ್ತೂರು : ವೀರಮಂಗಲ ಪಿಎಂಶ್ರೀ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆಯು ನಡೆದು ಹಿರಿಯ ವಿದ್ಯಾರ್ಥಿ ಸಂಘವನ್ನು ರಚಿಸಲಾಯಿತು. ನೂತನ ಅಧ್ಯಕ್ಷರನ್ನಾಗಿ ವಸಂತ ವೀರಮಂಗಲ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಶಾಲಾ ಮುಖ್ಯಗುರು ತಾರಾನಾಥ ಸವಣೂರು, ಸಂಘಟನಾ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ವೀರಮಂಗಲ, ಜತೆ ಕಾರ್ಯದರ್ಶಿಯಾಗಿ ಹರ್ಷ ಗುತ್ತು, ಕೋಶಾಧಿಕಾರಿಯಾಗಿ ಸೋಮಶೇಖರ ಉಪಾಧ್ಯಕ್ಷರಾಗಿ ರಝಾಕ್ ಆನಾಜೆ, ಸದಸ್ಯರಾಗಿ ರವಿಚಂದ್ರ,ಯೋಗೀಶ್ ವೀರಮಂಗಲ, ವೆಂಕಟರಮಣ ಗೌಡ, ಶಾಂತರಾಮ, ಸಮೀರ್, ಫಾರೂಕ್, ಹಮೀದ್, ಸುಮಿತ್ರಾ, ಶಿವಮ್ಮ ಆಯ್ಕೆಯಾದರು.