ದೆಹಲಿ ಭಾರತ ದೇಶದ ಕೇಂದ್ರ. ಅತ್ಯಂತ ಸುರಕ್ಷಿತ ಮತ್ತು ಪ್ರಮುಖ ಪ್ರದೇಶ.ಅಲ್ಲಿ ಎಲ್ಲವೂ ಇದೆ. ಪ್ರಧಾನಿ, ರಾಷ್ಟ್ರಪತಿ, ಸೇನಾ ನಾಯಕರು, ದೇಶದ ಪ್ರಮುಖರೆಲ್ಲಾ ಇದ್ದಾರೆ ಆದರೆ ದೆಹಲಿಯಲ್ಲಿ ಏನಿದ್ದರೆ ಏನು? – ಉಸಿರಾಟಕ್ಕೆ ಶುದ್ಧ ಗಾಳಿ ಇಲ್ಲದಿದ್ದರೆ ಏನು ಪ್ರಯೋಜನ?

0

ದೆಹಲಿ ಭಾರತ ದೇಶದ ಕೇಂದ್ರ ಅತ್ಯಂತ ಸುರಕ್ಷಿತ ಸ್ಥಳ ಅಲ್ಲಿ ಪಾರ್ಲಿಮೆಂಟ್ ಹೌಸ್, ರಾಷ್ಟ್ರಪತಿ ಭವನ, ದೇಶದ ಎಲ್ಲಾ ಪ್ರಮುಖ ಕಟ್ಟಡಗಳಿವೆ. ಪ್ರಧಾನಿ, ರಾಷ್ಟ್ರಪತಿ, ಸೇನಾ ಮುಖ್ಯಸ್ಥರು, ಸೈಂಟಿಸ್ಟ್‌ಗಳು, ದೇಶದ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಎಲ್ಲರೂ ಇದ್ದಾರೆ. ಅಲ್ಲಿ ಬೇಕಾದಷ್ಟು ಹಣವಿದೆ. ಜೀವನಕ್ಕೆ ಬೇಕಾದ ಎಲ್ಲವೂ ಸಿಗುತ್ತದೆ. ಆದರೆ ಶುದ್ಧ ಗಾಳಿ ಸಿಗುವುದಿಲ್ಲ.


ಸಾಮಾನ್ಯ ಸ್ಥಳದಲ್ಲಿ ಆರೋಗ್ಯಕರ ವಾಯುಮಾಲಿನ್ಯದ ಇಂಡೆಕ್ಸ್ 50ರಲ್ಲಿ ಅಥವಾ ಅದರ ಒಳಗೆ ಇರುತ್ತದೆ. ಆದರೆ ಡೆಲ್ಲಿಯ ಈಗಿನ ವಾಯುಮಾಲಿನ್ಯ ಇಂಡೆಕ್ಸ್ 372 ಆಗಿರುತ್ತದೆ. ಅಂದರೆ ಅದು ಉಸಿರಾಟದ ತೊಂದರೆಗೆ, ಜೀವಹಾನಿಗೆ ಕಾರಣವಾಗುತ್ತದೆ. ಕಟ್ಟಡ ಕಾಮಗಾರಿಗಳು, ವಾಹನದ ಇಂಧನ ಬಳಕೆ ಮತ್ತು ಬೆಳೆ, ಕಲ್ಮಶಗಳ ಸುಡುವಿಕೆ ಅಲ್ಲಿಯ ವಾಯುಮಾಲಿನ್ಯಕ್ಕೆ ಮುಖ್ಯ ಕಾರಣವಾಗಿರುತ್ತದೆ. ನಾವು ಹೀಗೆಯೇ ಮುಂದುವರಿದರೆ ದೆಹಲಿಯ ವಾಯುಮಾಲಿನ್ಯವನ್ನು ತಲುಪುತ್ತೇವೆ. ಆ ವಾಯುಮಾಲಿನ್ಯವು ನಮ್ಮಲ್ಲಿಯೂ ಉಂಟಾಗದಂತೆ ನೋಡಿಕೊಳ್ಳುವುದು ಆರೋಗ್ಯದ ದೃಷ್ಠಿಯಿಂದ ಬಹಳ ಮುಖ್ಯ.


ಆಕ್ಸಿಜನ್ ಉತ್ಪಾದನೆಗಾಗಿ ಕಾರ್ಬನ್ ಡೈ ಆಕ್ಸೈಡ್‌ನಿವಾರಣೆಗಾಗಿ, ಮಳೆಗಾಗಿ ಗಿಡಗಳನ್ನು ನೆಡುವುದು ಮತ್ತು ಅದರ ಬಗ್ಗೆ ಜಾಗೃತಿ ಉಂಟು ಮಾಡುವುದಕ್ಕಾಗಿ ಇದೇ ಜನವರಿ 10,11,12ರಂದು ಹಸಿರೇ ಉಸಿರು – ಮನೆ ಮನೆಯಲ್ಲಿ ಕೃಷಿ ಎಂಬ ಸಸ್ಯ ಜಾತ್ರೆಯನ್ನು ಪುತ್ತೂರಿನಲ್ಲಿ ನಡೆಸುತ್ತಿದ್ದೇವೆ. ಈ ಮೇಳದಲ್ಲಿ ಎಲ್ಲಾ ವಿಧದ ಗಿಡಗಳಿಗೆ ಸಂಬಂಧಪಟ್ಟ ನರ್ಸರಿಗಳು, ತರಕಾರಿ ಬೀಜದ ವ್ಯವಸ್ಥೆಗಳು ಇರುತ್ತದೆ. ಕೃಷಿಯ ಮೌಲ್ಯವರ್ಧನೆಯ ಸ್ಟಾಲ್‌ಗಳು ಇರುತ್ತದೆ. ಕೃಷಿಯ ಕುರಿತು ವಿವಿಧ ತಜ್ಞರಿಂದ ವಿಚಾರ ಸಂಕಿರಣಗಳಿವೆ. ಕೃಷಿಯಲ್ಲಿ ಸಾಧಕರನ್ನು ಗುರುತಿಸುವ ಕೆಲಸ ನಡೆಯಲಿದೆ. ವಿದ್ಯಾರ್ಥಿಗಳಲ್ಲಿ,ಸಾರ್ವಜನಿಕರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಹುಟ್ಟಿಸಲು ಕೃಷಿ ಜಾತ್ರೆಯ ಮೆರವಣಿಗೆ, ಕೃಷಿಯ ಬಗ್ಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.


ಬನ್ನಿ ಭಾಗವಹಿಸಿ, ಹಸಿರೇ ಉಸಿರು ಮಾಡುವ, ಮನೆ ಮನೆಯಲ್ಲಿ ಕನಿಷ್ಟ ಒಂದೊಂದು ಹಣ್ಣಿನ, ತರಕಾರಿ, ಹೂವಿನ ಔಷದೀಯ ಗಿಡ ನೆಡುವ, ಕೃಷಿ ಗಾರ್ಡನ್ ಮಾಡುವ ಆಂದೋಲನದಲ್ಲಿ ಭಾಗವಹಿಸಿ, ಆರೋಗ್ಯಕರ ವಾತಾವರಣಕ್ಕೆ ನಾವೆಲ್ಲರೂ ಶ್ರಮಿಸೋಣ.
- ಡಾ.ಯು.ಪಿ.ಶಿವಾನಂದ

LEAVE A REPLY

Please enter your comment!
Please enter your name here