ಬಡಗನ್ನೂರು: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ವಲಯದ ಭಕ್ತರ ಸಮಾಲೋಚನಾ ಸಭೆಯು ಕಂಕನಾಡಿ ಗರಡಿಯ ಸರ್ವಮಂಗಳ ಹಾಲ್ ನಲ್ಲಿ ಜರಗಿತು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ತುಳುನಾಡಿನ ಧಾರ್ಮಿಕ ಪರಂಪರೆಯಲ್ಲಿ ಬ್ರಹ್ಮಕಲಶ ಮತ್ತು ಹೊರೆಕಾಣಿಕೆಯಲ್ಲಿ ಇತಿಹಾಸವನ್ನು ಸೃಷ್ಟಿಸಿದ ಶ್ರೀ ಕ್ಷೇತ್ರ ಗೆಜ್ಜೆಗಿರಿಯನ್ನು ವಿಶ್ವದ ಬಿಲ್ಲವರು ಎಲ್ಲಾ ಒಂದಾಗಿ ಸೇರಿ ತಮ್ಮ ಸಂಘಟನೆಗಳ ಮೂಲಕ ಸಂಘಟಿತರಾಗಿ ನಿರ್ಮಿಸಿದ್ದಾರೆ. ಶ್ರೀ ಕ್ಷೇತ್ರ ಇಂದು ವಿಶ್ವ ಪ್ರಸಿದ್ಧಿಯನ್ನು ಪಡೆದಿದೆ. ಕ್ಷೇತ್ರದಲ್ಲಿ ಮಹಾ ಮಾತೆ ದೇಯಿ ಬೈದೆತಿ ಅಭಯ ಧಾತೆಯಾಗಿ ಜನರ ಕಷ್ಟಗಳನ್ನು ನಿವಾರಿಸುವ ಜೊತೆ ಮಹಾ ಮಾತೆಯ ಸಂಕಲ್ಪದಂತೆ ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಮ್ಮನ ಮಡಿಲ ಪ್ರಸಾದವನ್ನು ಸ್ವೀಕರಿಸುವ ಹಾಗೆ ಜಾತ್ರಾ ಮಹೋತ್ಸವ ಸಂಧರ್ಭದಲ್ಲಿ ಈ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು. ಮಹಾ ಮಾತೆಗೆ ಅರ್ಪಿತವಾಗುವ ವಸ್ತ್ರಾಧಿಗಳನ್ನು ಕೋಟಿ ಚೆನ್ನಯರು ಕೂಡ ಬಹಳ ಸಂತೋಷ ದಿಂದ ಸ್ವೀಕರಿಸುತ್ತಾರೆ ಎಂದು ಪ್ರಶ್ನಾ ಚಿಂತನೆಯ ವಿಷಯವನ್ನು ತಿಳಿಸಿ ಭಕ್ತಾಧಿಗಳಿಗೆ ಮಾತೃ ವಾತ್ಸಲ್ಯ ಕಾರುಣ್ಯ ಮೂರ್ತಿಯ ಅನುಗ್ರಹವಾಗುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದರು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ ರವರು ಮಾತನಾಡಿ, ಕ್ಷೇತ್ರದ ಕಾರಣಿಕ ಮತ್ತು ದೈವಿಕತೆಯ ಅನುಭವಗಳನ್ನು ವಿವರಿಸಿದರು. ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ದ್ವಿತೀಯ ಉಪಾಧ್ಯಕ್ಷೆ ವಿದ್ಯಾ ರಾಕೇಶ್ ಇವರು ಮಾತೃ ಸಂಕಲ್ಪ ಮತ್ತು ಅಮ್ಮನ ಮಡಿಲ ಪ್ರಸಾದ ಬಗ್ಗೆ ವಿವರಿಸಿದರು.
ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷ, ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಚಿತ್ತರಂಜನ್ ಕಂಕನಾಡಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಕ್ಷೇತ್ರದ ಟ್ರಸ್ಟಿ ಶೈಲೇಂದ್ರ ವೈ ಸುವರ್ಣ,ನಗರ ಪಾಲಿಕೆ ವಿಪಕ್ಷ ನಾಯಕ ಅನಿಲ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕುಮಾರ್, ಟ್ರಸ್ಟಿಗಳಾದ ಚಂದ್ರಶೇಖರ್ ಉಚ್ಚಿಲ್, ನಾರಾಯಣ ಮಚ್ಚಿನ, ಜಯಾನಂದ ಎಂ , ಮೋಹನ್ ದಾಸ್ ವಾಮಂಜೂರು ಹಾಗೂ ಮಹಿಳಾ ಪ್ರಮುಖರಾದ ಚಂಚಲ ತೇಜೋಮಯ, ದೀಪಿಕಾ, ಹೇಮಾ ನಿಸರ್ಗ, ರೇಖಾ, ಅಮಿತ ಮುಂತಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಬಿಲ್ಲವ ಸಂಘ, ಶ್ರೀ ನಾರಾಯಣ ಗುರು ಸಂಘಗಳ ಪ್ರಮುಖರು, ಯುವವಾಹಿನಿ, ಬಿರುವೆರ್ ಕುಡ್ಲ,ಹಾಗೂ ಮಹಿಳಾ ಸಂಘಗಳ ಪ್ರಮುಖರು ಭಾಗವಹಿಸಿದ್ದರು.