ಅಧ್ಯಕ್ಷರಾಗಿ ಜನಾರ್ಧನ ರೈ ಪಡ್ಡಂಬೈಲು,ಪ್ರಧಾನ ಕಾರ್ಯದರ್ಶಿಯಾಗಿ ಮಹಾಬಲ ರೈ ಕುಕ್ಕುಂಜೋಡು
ಪುತ್ತೂರು:ಭಾರತೀಯ ಕಿಸಾನ್ ಸಂಘ ಪುತ್ತೂರು ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯು ರಾಜ್ಯ ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್ ರಾಜುರವರ ಉಪಸ್ಥಿತಿಯಲ್ಲಿ ರಚಿಸಿದರು.
ನೂತನವಾಗಿ ಪುತ್ತೂರು ತಾಲೂಕಿನ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾಗಿ ಜನಾರ್ಧನ್ ರೈ, ಪಡ್ಡಂಬೈಲು,ಪ್ರದಾನ ಕಾರ್ಯದರ್ಶಿ: ಮಹಾಬಲ ರೈ, ಕುಕ್ಕುಂಜೋಡು,
ಉಪಾಧ್ಯಕ್ಷರಾಗಿ ಬೆಳ್ಳಿಯಪ್ಪ ಗೌಡ, ವೀರಮಂಗಳ, ಧನಂಜಯ ಕುಲಾಲ್, ಕಂಪ ವಾಸುದೇವ ಸಾಲಿಯಾನ್, ಪಜೀಮನ್ನು, ಗೌರವ ಸಲಹೆಗಾರರಾಗಿ A P, ಸದಾಶಿವ, ಮರಿಕೆ,
ಮೋಹನ್ ರೈ, ನರಿಮೊಗರು, ಕಿಶೋರ್ ಕುಮಾರ್,ಆಲಡ್ಕ, ರಮೇಶ್ ರೈ, ಬೊಲಿಕ್ಕಳ, ಶಂಕರ ನಾರಾಯಣ, ನೆ,ಮುಡ್ನೂರು, ಮಾಧ್ಯಮ ಪ್ರಮುಖರಾಗಿ ಶ್ರೀಕಾಂತ್ ಕಾವು,ಮಹಿಳಾ ಪ್ರಮುಖರಾಗಿ ಆಶಾ ಭಂಡಾರಿ, ಡಿಂಬ್ರಿ, ಶೋಭಾ ನರಿಮೊಗರು, ಗೀತಾ ಸುಬ್ರಾಯ ಗೌಡ, ಕಡ್ಯ,ಕಾನೂನು ಸಲಹೆಗಾರರಾಗಿ ಆದರ್ಶ್ ರೈ, ಎಂಡ್ ಸಾಗು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರವೀಣ್ ರೈ, ಪಂಜೊಟ್ಟು, ಜಗನ್ನಾಥ್ ರೈ, ಕೊಮ್ಮಂಡ, ರಾಜೀವ ಪೂಜಾರಿ,ನೆಕ್ಕಿಲಾಡಿ, ಬಾಲಕೃಷ್ಣ,ನೆಕ್ಕಿಲಾಡಿ, ನಾಗೇಶ್ ಪಟ್ಟೆಮಜಲು, ಹೊನ್ನಪ್ಪಗೌಡ, ನೆಟ್ಟನಿಗೆ ಮುಡ್ನೂರು, ಸುಮಂತ್ ರೈ,ಬೆಟ್ಟಂಪಾಡಿ ಇವರನ್ನು ಆಯ್ಕೆ ಮಾಡಿದರು.
ಬಳಿಕ ನಡೆದ ಸಭೆಯಲ್ಲಿ ಕುಮ್ಕಿ ಹಕ್ಕಿನ, ಅಡಿಕೆಗೆ ಎಳೆಚುಕ್ಕಿ ಬಾದೆ, ಕಾಡುಪ್ರಾಣಿಗಳ ಹಾವಳಿ ಬಗ್ಗೆ, ಇನ್ನಿತರ ಸಮಸ್ಯೆಗಳ ಮತ್ತು ಹೋರಾಟದ ಬಗ್ಗೆ ಚರ್ಚೆ ನಡೆಸಿದರು.
ಸಭೆಯಲ್ಲಿ ತಾಲೂಕಿನಿಂದ ಜಿಲ್ಲಾ ಸಮಿತಿಗೆ ಪೂರ್ಣಚಂದ್ರ, ರಾಮಪ್ರಸಾದ್ ಇವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಕಿಸಾನ್ ಸಂಘದ ಸಂಘಟನಾ ಕಾರ್ಯದರ್ಶಿ, ನಾರಾಯಣ ಸ್ವಾಮಿ, ಪ್ರಾಂತ್ಯ ಪ್ರಮುಖ ಸುಬ್ರಾಯ ಉಪಸ್ಥಿತರಿದ್ದರು.