ಸ್ನೋ ಸ್ಪೂನ್ ಐಸ್ ಕ್ರೀಂ ಕೆಫೆ ಶುಭಾರಂಭ

0

ಪುತ್ತೂರು:ಪುತ್ತೂರಿನ ಜನತೆಯ ಬಹು ನಿರೀಕ್ಷೆಯ ವಿಭಿನ್ನ ಮಾದರಿಯ ಐಸ್‌ಕ್ರೀಂ ಕೆಫೆ ಸ್ನೋ ಸ್ಪೋನ್ ಜ.6ರಂದು ಬೊಳುವಾರು ಇನ್‌ಲ್ಯಾಂಡ್ ಮಯೂರದ ಬಳಿ ಶುಭಾರಂಭಗೊಂಡಿತು.


ನೂತನ ಮಳಿಗೆಯನ್ನು ಉದ್ಘಾಟಿಸಿದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಡಿ.ಪಿ.ಭಟ್ ಮಾತನಾಡಿ, ವಿಭಿನ್ನವಾದ ಐಸ್ ಕ್ರೀಂ ಮಳಿಗೆ ಉತ್ತಮ ಸೇವೆಯೊಂದಿಗೆ ಪುತ್ತೂರಿನ ಗ್ರಾಹಕರ ವಿಶ್ವಾಸ ಗಳಿಸುವ ಮುಖಾಂತರ ಮಳಿಗೆಯು ಅಭಿವೃದ್ಧಿ ಕಾಣಲಿ ಎಂದು ಶುಭಹಾರೈಸಿದರು.


ಮುಖ್ಯ ಅತಿಥಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪುತ್ತೂರಿಗೆ ಎಲ್ಲಾ ಮಾದರಿಯ ಮಳಿಗೆಗಳು ಬರುತ್ತಿದೆ. ಮಂಗಳೂರು ಮೀನು ಹಾಗೂ ಐಸ್‌ಕ್ರೀಂ ದೇಶದಲ್ಲಿ ಹೆಸರುವಾಸಿಯಾಗಿದೆ.ಪುತ್ತೂರಿನಲ್ಲಿ ಐಸ್‌ಕ್ರೀಂನ ಸರಿಯಾದ ಮಳಿಗೆ ಇರಲಿಲ್ಲ.ಸ್ನೋ ಸ್ಪೂನ್ ಎಂಬ ವಿಭಿನ್ನ ಶೈಲಿ ಕ್ರೀಂ ಪಾರ್ಲರ್ ನಗರದ ಹೃದಯ ಭಾಗದಲ್ಲಿ ಪ್ರಾರಂಭಗೊಂಡಿದೆ. ಮ್ಹಾಲಕ ಪ್ರವೀಣ್‌ರವರು ಬೆಳೆಯುತ್ತಿರುವ ಪುತ್ತೂರಿಗೆ ದೊಡ್ಡ ಕೊಡುಗೆ ನೀಡಿದ್ದಾರೆ.ಎಲ್ಲಾ ಮಾದರಿಯ ಉದ್ಯಮಗಳು ಬರಲಿ, ಉದ್ಯೋಗ ದೊರೆಯಲಿ. ಪುತ್ತೂರಿನ ಜನತೆ ಇದನ್ನು ಸದ್ಬಳಕೆ ಮಾಡಲಿ ಎಂದರು.


ನಗರ ಸಭಾ ಉಪಾಧ್ಯಕ್ಷ ಬಾಲಚಂದ್ರ ಮರೀಲ್ ಮಾತನಾಡಿ, ಪುತ್ತೂರು ಮಾತ್ರವಲ್ಲದೆ ಇತರ ತಾಲೂಕುಗಳಲ್ಲಿ ಈಗಾಗಲೇ ವಿವಿಧ ರೀತಿಯ ವ್ಯಾಪಾರ ಮಳಿಗೆಗಳನ್ನು ಪ್ರಾರಂಭಿಸಿರುವ ಪ್ರವೀಣ್‌ರಾಜ್ ಅವರು 6ನೇ ಮಳಿಗೆ ಐಸ್ ಕ್ರೀಂ ಕೆಫೆ ಪ್ರಾರಂಭಿಸಿದ್ದಾರೆ.ವ್ಯಾಪಾರದ ಜೊತೆಗೆ ಹಲವು ಮಂದಿಗೆ ಉದ್ಯೋಗವು ಸೃಷ್ಠಿಯಾಗಿದೆ.ಇವರ ಮೂಲಕ ಇನ್ನಷ್ಟು ಮಳಿಗೆಗಳು ರಾಜ್ಯದಾದ್ಯಂತ ವ್ಯಾಪಿಸಿ ದೊಡ್ಡ ವಾಣಿಜ್ಯೋದ್ಯಮಿಯಾಗಿ ಬೆಳೆಯಲಿ ಎಂದು ಆಶಿಸಿದರು.


ನಗರ ಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ಸಂಸ್ಥೆಯ ಮ್ಹಾಲಕ ಪ್ರವೀಣ್‌ರಾಜ್‌ರವರಲ್ಲಿ ವ್ಯಾಪಾರ ಮನೋಭಾವದ ಜೊತೆಗೆ ಪ್ರಾಣಿ, ಪಕ್ಷಿಗಳ ಕಾಳಜಿಯಿದೆ.ಇದಕ್ಕೆ ಪೂರಕವಾದ ಔಷಽಗಳ ಮಳಿಗೆಯನ್ನು ಪ್ರಾರಂಭಿಸಿದ್ದಾರೆ.ಸ್ಪರ್ಧಾತ್ಮಕ ಯುಗದಲ್ಲಿ ಗುರಿ ತಲುಪಲು ಕಾರ್ಯತತ್ಪರತೆಯಿಂದ ಸೇವೆ ನೀಡುತ್ತಿದ್ದಾರೆ.ಗುಣಮಟ್ಟ ಹಾಗೂ ಸೇವೆಯೊಂದಿಗೆ ಅಭಿವೃದ್ಧಿ ಹೊಂದಲಿ ಎಂದು ಶುಭಹಾರೈಸಿದರು.


ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ನಗರದ ಹೆಬ್ಬಾಗಿಲಲ್ಲಿ ಸ್ನೋ ಸ್ಪೂನ್ ಕ್ರೀಂ ಪಾರ್ಲರ್ ಪ್ರಾರಂಭಗೊಂಡಿದ್ದು ಸಮಾಜಕ್ಕೆ ಪ್ರಯೋಜನವಾಗಲಿದೆ.ಬೆಳೆಯುತ್ತಿರುವ ಪುತ್ತೂರಿನ ಅಭಿವೃದ್ಧಿಯ ಕಿರೀಟಕ್ಕೆ ಮತ್ತೊಂದು ಗರಿಯಾಗಿದೆ.ನಗರದ ಅಭಿವೃದ್ಧಿಗೆ ಇಂತಹ ಮಳಿಗೆ ಪೂರಕವಾಗಿದೆ.ಸಮಾಜದ ಸರ್ವರ ವಿಶ್ವಾಸದ ಮಳಿಗೆಯಾಗಿ ಬೆಳೆಯಲಿ ಎಂದು ಹೇಳಿದರು.


ಹಿಂದು ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಎಳೆಯ ವಯಸ್ಸಿನಲ್ಲೇ ಉದ್ಯಮ ಪ್ರಾರಂಭಿಸಿ, ಅರು ಯಶಸ್ವಿ ಉದ್ಯಮಗಳನ್ನು ಮುನ್ನಡೆಸಿ, ಯುವಕರಿಗೆ ಉದ್ಯೋಗ ನೀಡುವ ಮೂಲಕ ಪ್ರವೀಣ್‌ರಾಜ್ ಯುವಕರಿಗೆ ರೋಲ್ ಮಾಡೆಲ್ ಆಗಿದ್ದಾರೆ.ಸುಸಜ್ಜಿತ ಕ್ರೀಂ ಪಾರ್ಲರ್ ಪ್ರಾರಂಭಿಸಿ ಪುತ್ತೂರಿನ ಅವಶ್ಯಕತೆ ಪೂರೈಸಿದ್ದಾರೆ.ನಿಮ್ಮ ಸಾಧನೆಯು ಯುವಕರಿಗೆ ಪ್ರೇರಣೆಯಾಗಿದೆ. ನಿಮ್ಮ ಮೂಲಕ ಇನ್ನಷ್ಟು ಮಳಿಗೆಗಳು ಪ್ರಾರಂಭಗೊಂಡು ನೂರಾರು ಮಂದಿಗೆ ಉದ್ಯೋಗ ದೊರೆಯುವಂತಾಗಲಿ ಎಂದು ಹಾರೈಸಿದರು.
ಆರ್ಕಿಟೆಕ್ಟ್ ಮಯ್ಯೂರ್ ಜಾದವ್‌ರವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.


ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಸಂತ ಕೆದಿಲಾಯ, ಕಟ್ಟಡದ ಮ್ಹಾಲಕ ಭಾಸ್ಕರ ಬೊಳುವಾರು, ಮಹೇಶ್ ಪೊದುವಾಳ್, ಕಟ್ಟಡದ ಮ್ಹಾಲಕ ಬಾಬು ಸಪಲ್ಯ, ದೇವಪ್ಪ ಬಂಗೇರ, ತಮನ್ವಿ ಸಿಲ್ಕ್‌ನ ವಿಜೇತ್, ಭರತ್, ಮಹೇಶ್, ಮನೋರಾಜ್, ನವೀನ್ ಕುಮಾರ್, ಜಯಲಕ್ಷ್ಮೀ, ಸುನಿಲ್, ಮ್ಹಾಲಕರ ತಾಯಿ ವಿಮಲ, ಪತ್ನಿ ರಶ್ಮೀಲ, ಪುತ್ರಿಯರಾದ ಪ್ರೌಲ್ಮೀ, ಪ್ರಾಕ್ಷ್ಣ ಉಪಸ್ಥಿತರಿದ್ದರು.ಸುಶ್ರುತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮ್ಹಾಲಕ ಪ್ರವೀಣ್‌ರಾಜ್ ವಂದಿಸಿದರು.

ಐಸ್ ಕ್ರೀಂ ಎಂಬುದು ಎಲ್ಲರಿಗೂ ಇಷ್ಟವಾದ ಆಹಾರ.ಮಂಗಳೂರಿನಲ್ಲಿ ವಿವಿಧ ಕಂಪನಿಗಳು ಗ್ರಾಹಕರ ಅಭಿರುಚಿಯಂತೆ ಸೇವೆ ನೀಡುತ್ತಿದೆ.ಪುತ್ತೂರಿನಲ್ಲಿ ಅದರ ಕೊರತೆ ಕಂಡು ಅದರ ಪ್ರೇರಣೆಯಿಂದ ಮಂಗಳೂರಿನ ಮಾದರಿಯಲ್ಲಿ ಸ್ಪೆಷಲ್ ಐಸ್‌ಕ್ರೀಂ ತಾಲಿ ಸೇರಿದಂತೆ ಐಸ್‌ಕ್ರೀಂನ ವಿವಿಧ ಉತ್ಪನ್ನಗಳ ಸವಿರುಚಿ ಸವಿಯಲು ಅವಕಾಶವಾಗುವಂತೆ ಮಳಿಗೆಯನ್ನು ಪ್ರಾರಂಭಿಸಲಾಗಿದೆ.ವಿಭಿನ್ನ ರೀತಿಯ ಮಳಿಗೆಗೆ ಪುತ್ತೂರಿನ ಜನತೆ ನಮ್ಮೊಂದಿಗೆ ಕೈ ಜೋಡಿಸುವಂತೆ ವಿನಂತಿಸುತ್ತೇವೆ

-ಪ್ರವೀಣ್ ರಾಜ್, ಮ್ಹಾಲಕರು.

LEAVE A REPLY

Please enter your comment!
Please enter your name here