ಪುತ್ತೂರು: ಜ.3ರಂದು ನಿಧನ ಹೊಂದಿದ ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಕುರೆಮಜಲು ಅವರ ಮನೆಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಜ.7ರಂದು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು, ಕಾರ್ಯದರ್ಶಿ ಅಶ್ರಫ್ ಮುಲಾರ್, ಕಾಂಗ್ರೆಸ್ ಮುಖಂಡರಾದ ಯಾಕೂಬ್ ಮುಲಾರ್, ಇಬ್ರಾಹಿಂ ಮುಲಾರ್, ಅಣ್ಣಿ ಪೂಜಾರಿ ಹಿಂದಾರು, ಗಣೇಶ್ ಬಂಗೇರ, ಪದ್ಮಯ್ಯ ಬಂಡಿಕಾನ ಉಪಸ್ಥಿತರಿದ್ದರು.