ಅಧ್ಯಕ್ಷ: ಇಸ್ಮಾಯಿಲ್ ನೆಲ್ಯಾಡಿ, ಕಾರ್ಯದರ್ಶಿ: ವಿಮಲ್ ನೆಲ್ಯಾಡಿ
ನೆಲ್ಯಾಡಿ: ಪಿಎಂಶ್ರೀ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೆಲ್ಯಾಡಿ ಇಲ್ಲಿನ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ನ್ಯಾಯವಾದಿ, ನೋಟರಿ ಇಸ್ಮಾಯಿಲ್ ನೆಲ್ಯಾಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಿಕ್ಷಕ ವಿಮಲ್ ನೆಲ್ಯಾಡಿ ಆಯ್ಕೆಯಾಗಿದ್ದಾರೆ.
ಜ.4ರಂದು ನಡೆದ ಹಿರಿಯ ವಿದ್ಯಾರ್ಥಿಗಳ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಬಾಲಕೃಷ್ಣ ಬಾಣಜಾಲು, ಗೌರವ ಸಲಹೆಗಾರರಾಗಿ ಸರ್ವೋತ್ತಮ ಗೌಡ, ಮೊಹಮ್ಮದ್ ಹನೀಫ್, ಜಯಾನಂದ ಬಂಟ್ರಿಯಾಲ್, ಉಪಾಧ್ಯಕ್ಷರಾಗಿ ಮುರಳಿ, ಇಕ್ಬಾಲ್, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಜಬ್ಬಾರ್, ರಮೇಶ್ ಶೆಟ್ಟಿ ಬೀದಿ ಮನೆ, ಕೋಶಾಧಿಕಾರಿಯಾಗಿ ಚಂದ್ರಶೇಖರ್ ಬಾಣಜಾಲು, ಸಂಘಟನಾ ಕಾರ್ಯದರ್ಶಿಯಾಗಿ ಅಬ್ರಹಾಂ ಕೆ.ಪಿ., ಶಿವಣ್ಣ, ಕ್ರೀಡಾ ಕಾರ್ಯದರ್ಶಿಯಾಗಿ ಲೋಕೇಶ್ ಬಾಣಜಾಲು ಆಯ್ಕೆಯಾದರು.