ಕೆಮ್ಮಾಯಿ: ಚಿಕ್ಕಮುಡ್ನೂರು ಗ್ರಾಮದ ಮೂಡಾಯೂರು ಆರಿಗೋ ಪೆರ್ಮಂಡ ಗರೋಡಿಯಲ್ಲಿ ಶ್ರೀ ಬೈದೇರುಗಳ ನೇಮ ಜ.12ರಂದು ನಡೆಯಲಿದೆ.
ಜ.8ರಂದು ಗರಡಿಯಲ್ಲಿ ಹೋಮ, ಶುದ್ಧೀಕರಣಗಳು ನಡೆದಿದ್ದು, ಜ.10ರಂದು ರಾತ್ರಿ ಶ್ರೀ ವಿಷ್ಣುಮೂರ್ತಿ ದೇವರಿಗೆ ರಂಗಪೂಜೆ ಮತ್ತು ಮೂಡಾಯೂರು ಗುತ್ತಿನಿಂದ ಭಂಡಾರ ತೆಗೆದು ಬೈದೇರುಗಳ ತಂಬಿಲ, ಜ.11ರಂದು ರಾತ್ರಿ ಇಷ್ಟದೇವತೆ ಮತ್ತು ಏಳ್ನಾಡು ದೈವಗಳ ನೇಮ ನಡೆಯಲಿದೆ. ಜ.12ರಂದು ರಾತ್ರಿ ಬೈದೇರುಗಳ ನೇಮ ನಡೆಯಲಿದ್ದು ರಾತ್ರಿ 7.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ, 8.50ಕ್ಕೆ ಗರಡಿ ಇಳಿಯುವುದು, ಮಾಣಿಬಾಲೆ ನೇಮ, ಕಡ್ಸಲೆ ಬಲಿ ವಗೈರೆ ನಡೆಯಲಿದೆ ಎಂದು ಡಾ| ಅಶೋಕ್ ಪಡಿವಾಳ್ ಮೂಡಾಯೂರುಗುತ್ತು ಮತ್ತು ಧನ್ಯಕುಮಾರ್ ರೈ ಬಿಳಿಯೂರುಗುತ್ತು ತಿಳಿಸಿದ್ದಾರೆ.