ಪುತ್ತೂರು: ‘ನ್ಯಾಚುರಲ್’ ಮತ್ತು ‘ಆರ್ಗಾನಿಕ್’ ಎಂಬೆರಡು ಪದಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನಮನ್ನಣೆಯನ್ನು ಗಳಿಸುತ್ತಿದೆ. ನಾವು ವಾಸಿಸುವ ಪರಿಸರದಿಂದ ಹಿಡಿದು ನಾವು ತಿನ್ನುವ ಆಹಾರ ಮತ್ತು ಕುಡಿಯುವ ನೀರಿನವರೆಗೆ ಎಲ್ಲವೂ ಕಲುಷಿತಗೊಂಡಿರುವುದೇ ಇದಕ್ಕೆ ಕಾರಣವಾಗಿದೆ. ರೋಗ ಮುಕ್ತ ಆರೋಗ್ಯಕರ ಜೀವನಕ್ಕಾಗಿ ಇಂದು ನಮಗೆ ಪ್ರಕೃತಿ ಜನ್ಯ ಆಹಾರ ಪದಾರ್ಥಗಳು ಬಹಳ ಮುಖ್ಯವಾಗಿದೆ. ಹಾಗಾಗಿ,ಮಹಾನಗರಗಳಲ್ಲಿ ಮಾತ್ರವಲ್ಲದೇ ಪುತ್ತೂರಿನಂತಹ ಗ್ರಾಮೀಣ ಪ್ರದೇಶಗಳಲ್ಲೂ ಸಹ ಇಂದು ಈ ಆರ್ಗಾನಿಕ್ ಉತ್ಪನ್ನಗಳು ಜನರ ದೈನಂದಿನ ಜೀವನದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಲಾರಂಭಿಸಿವೆ.
ಇದೀಗ, ಪುತ್ತೂರು ಸೇರಿದಂತೆ ಹತ್ತೂರಿನ ಸಹೃದಯಿ ಗ್ರಾಹಕರ ಬೆಂಬಲ ಮತ್ತು ಪ್ರೋತ್ಸಾಹದಿಂದ ಕಳೆದ 7 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಾ ಬಂದಿರುವ ಮರಿಕೆ ಸಾವಯವ ಮಳಿಗೆಯು ಜ.14ರ ಮಕರ ಸಂಕ್ರಮಣದ ಶುಭ ದಿನದಂದು ಎಪಿಎಂಸಿ ರಸ್ತೆ ಆದರ್ಶ ಆಸ್ಪತ್ರೆಯ ಎದುರಿನಲ್ಲಿರುವ ‘ತ್ರಿನೇತ್ರ ಕಾಂಪ್ಲೆಕ್ಸ್’ಗೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ.
ಶ್ಯಾಮ ಜ್ಯುವೆಲ್ಸ್ ಗ್ರೂಪ್ನ ಚೇರ್ಮೆನ್ ಆಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯ ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಶ್ಯಾಮ ಜ್ಯುವೆಲ್ಸ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪುತ್ತೂರು ಶಾರದಾ ನೇತ್ರಾಲಯದ ಶ್ರೀದೇವಿ ಕಾನಾವು ಹಾಲುಕ್ಕಿಸುವ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಗ್ರಾಮರಾಜ್ಯ ಟ್ರಸ್ಟ್ ಸಂಯೋಜಕ ಕೃಷ್ಣಪ್ರಸಾದ್ ಅಮ್ಮಂಕಲ್ಲು, ಎಸ್ಡಿಪಿ ರೆಮೆಡೀಸ್ನ ರೂಪಾಲೇಖ, ವಿಮಾ ಸಲಹೆಗಾರ ಶಿವಸುಬ್ರಹ್ಮಣ್ಯ ಪೆಲತಡ್ಕ ಸೇರಿದಂತೆ ಅನೇಕ ಗಣ್ಯರು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಸಂಸ್ಥೆಯ ಪ್ರವರ್ತಕರಾಗಿರುವ ಮಾನಸ ವೈ ಮತ್ತು ಸುಹಾಸ್ ಮರಿಕೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುತ್ತೂರು ಹಾಗೂ ಸುತ್ತ ಹತ್ತೂರಿನ ಗ್ರಾಹಕರು ಕಳೆದ ಏಳು ವರ್ಷಗಳಿಂದ ನಮ್ಮ ಸಂಸ್ಥೆಯನ್ನು ಬೆಂಬಲಿಸಿ ಕೈಹಿಡಿದು ನಡೆಸುವ ಮೂಲಕ ತಮ್ಮ ಪ್ರೀತಿಯನ್ನು ತೋರಿಸಿದ್ದು, ಮುಂದಿನ ದಿನಗಳಲ್ಲೂ ಗ್ರಾಹಕ ಬಂಧುಗಳಿಂದ ಇದೇ ರೀತಿಯ ಬೆಂಬಲ ಮತ್ತು ಪ್ರೋತ್ಸಾಹಗಳನ್ನು ಬಯಸುವುದಾಗಿ ಸಂಸ್ಥೆಯ ಪ್ರವರ್ತಕ ಸುಹಾಸ್ ಮರಿಕೆ ಈ ಮೂಲಕ ಕೇಳಿಕೊಂಡಿದ್ದಾರೆ.
ಮಳಿಗೆಯಲ್ಲಿ ಗ್ರಾಹಕರಿಗೆ ಈ ಎಲ್ಲಾ ‘ಆರ್ಗಾನಿಕ್’ ಸೇವಾ-ಸೌಲಭ್ಯಗಳು ಲಭ್ಯ:
*ವಿಶಾಲವಾದ ಮಳಿಗೆ ಮತ್ತು ವಿಶಾಲವಾದ ಪಾರ್ಕಿಂಗ್ ಸೌಲಭ್ಯ
*ಪ್ರತೀ ಮಂಗಳವಾರ ಮಧ್ಯಾಹ್ನ ನಂತರ ಸಾವಯವ ಹಣ್ಣು ಮತ್ತು ತರಕಾರಿ ಸಂತೆ
*ಸಾವಯವ ಧಾನ್ಯಗಳು, ಅಕ್ಕಿ-ಬೇಳೆ ಕಾಳು
*ಎಲ್ಲಾ ಬಗೆಯ ಸಿರಿ ಧಾನ್ಯಗಳು ಅತೀ ಕಡಿಮೆ ಬೆಲೆಯಲ್ಲಿ
*ಸಾಂಪ್ರದಾಯಿಕ ತಿಂಡಿ ತಿನಸುಗಳು ಮತ್ತು ಮನೆಯಲ್ಲೇ ತಯಾರಿಸಿದ ಹುಡಿ
*ದೇಸಿ ಗೋವಿನ ಉತ್ಪನ್ನಗಳು*ದೇಸಿ ಹಸುವಿನ ಹಾಲು, ತುಪ್ಪ, ಮಜ್ಜಿಗೆ, ಪನೀರ್.. ಇತ್ಯಾದಿ
*ಗೃಹ ಉಪಯೋಗಿ ಸಲಕರಣೆಗಳು
*ಗಾರ್ಡನ್ ಇಕ್ಯುಪ್ಮೆಂಟ್ ಗಳು
*ಆರ್ಟಿಫಿಷಿಯಲ್ ರಹಿತ ಪರ್ಫ್ಯೂಮ್ ಗಳು, ಬಾಡಿ ವಾಶ್ ಹಾಗೂ ಶಾಂಪೂಗಳು
*ಶುದ್ಧ ಕುಂಕುಮ ಮತ್ತು ಅರಶಿನ
*ಶುದ್ಧ ಅಗರ್ ಬತ್ತಿ ಧೂಪಗಳು
*ಡ್ರೈ ಫ್ರೂಟ್ಸ್ ಮತ್ತು ನಟ್ಸ್
*ಮರಿಕೆ ನ್ಯಾಚುರಲ್ ಐಸ್ ಕ್ರೀಂ