ಪುತ್ತೂರು: ಕುಂಬ್ರ ಅಂಗನವಾಡಿಯಲ್ಲಿ ಮಕ್ಕಳ ಬಿಸಿಯೂಟ ತಯಾರಿಸಲು ತರಕಾರಿ ಹಚ್ಚುವರೇ ಮೆಟ್ಟು ಕತ್ತಿಯ ಅವಶ್ಯಕತೆ ಇದ್ದು ,ಇದನ್ನು ಮನಗಂಡ ಮಕ್ಕಳ ಪೋಷಕರಾದ ಕಮಲ ನಾರಾಯಣ ದಂಪತಿಗಳು ಕುಂಬ್ರ ತಮ್ಮ ಮಗ ವಿಖ್ಯಾತ್ ನ ಐದನೇ ವರ್ಷದ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಸುಜಾತ ಸಂತೋಷ್ ರೈ, ಬಾಲವಿಕಾಸ ಸಮಿತಿಯ ಸದಸ್ಯರಾದ ಕೆಪಿಎಸ್ ಕುಂಬ್ರ ಇದರ ಪ್ರಭಾರ ಮುಖ್ಯ ಶಿಕ್ಷಕರಾದ ಜುಲಿಯಾನ ಮೊರಸ್, ಅಂಗನವಾಡಿ ಕಾರ್ಯಕರ್ತೆ ಆಶಾಲತಾ ರೈ ಹಾಗೂ ಸಹಾಯಕಿ ರಾಜೀವಿ ಕೆ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಆಶಾಲತಾ ರೈ ಶುಭ ಹಾರೈಸಿ ಕೊಡುಗೆಯನ್ನು ಸ್ವೀಕರಿಸಿ ಧನ್ಯವಾದ ಸಮರ್ಪಿಸಿದರು.