ಅರಿಯಡ್ಕ :ಅರಿಯಡ್ಕ ಗ್ರಾಮದ ಕುರಿಂಜ ಕುಂಟಾಪುವಿನಲ್ಲಿ ಶ್ರೀ ವರ್ಣರ ಪಂಜುರ್ಲಿ ಮತ್ತು ಪರಿವಾರದೈವಗಳ ಪುನರ್ ಪ್ರತಿಷ್ಠಾ ಕಲಶೋತ್ಸವ, ಕುಂಟಾಪು ಶಾಖೆಯ ತರವಾಡು ಮನೆಯ ಗೃಹಪ್ರವೇಶೋತ್ಸವ ಮತ್ತು ದೈವಗಳ ನೇಮೋತ್ಸವ ಫೆಬ್ರವರಿ 9 ರಿಂದ ನಡೆಯಲಿದ್ದು, ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜ.7 ರಂದು ಮೂಲಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕುಂಟಾರು ವಿಷ್ಣು ತಂತ್ರಿಗಳು, ಸಹಾಯಕರಾದ ಮುರಳಿ, ವಿಶ್ರಾಂತ ಸೈನಿಕರಾದ ಶೇಷಪ್ಪ ಮೂಲ್ಯ, ವಿಶ್ರಾಂತ ಎ. ಎಸ್. ಐ. ಶ್ರೀಧರಮಣಿಯಾಣಿ ಕುತ್ಯಾಡಿ, ಕೋಟಿ ಚೆನ್ನಯ ,ನೇತ್ರಾವತಿ ಗರಡಿ ಕುಕ್ಕುತಡಿ ಇದರ ಮುಖ್ಯಸ್ಥರಾದ ಜಯರಾಮ ಪೂಜಾರಿ ಕುಕ್ಕುತಡಿ, ಕೌಡಿಚಾರು ಶ್ರೀ ಕೃಷ್ಣ ಭಜನಾ ಮಂದಿರದ ಕೋಶಾಧಿಕಾರಿಗಳಾದ ತಿಲಕ್ ರೈ, ಗೋಕುಲ ಕನ್ಸ್ಟ್ರಕ್ಷನ್ ನ ಇಂಜಿನಿಯರಾದ ನವೀನ್ ಬೆಟ್ಟಂಪಾಡಿ, ಕುಟುಂಬದ ಹಿರಿಯರಾದ ಕುಂಇಕ್ಕ ಕುಂಟಾಪು, ಸೀತಮ್ಮ ಕೊಪ್ಪಳ, ಸರಸ್ವತಿ ಕುಂಟಾಪು,ರಾಮ ಮಣಿಯಾಣಿ ಕುರಿಂಜಮೂಲೆ, ಟ್ರಸ್ಟ್ ನ ಅಧ್ಯಕ್ಷರಾದ ಸೀತಾರಾಮ ಮಣಿಯಾಣಿ ಕೂಟ್ಲುಂಗಾಲು ಮತ್ತು ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು, ಕುಟುಂಬಸ್ಥರು ಹಾಗೂ ಬಂಧುಗಳು ಉಪಸ್ಥಿತರಿದ್ದರು. ಕುಂಟಾರು ವಿಷ್ಣು ತಂತ್ರಿಗಳ ನೇತೃತ್ವದಲ್ಲಿ ದೈವದ ಭಂಡಾರದ ಜೀರ್ಣೋದ್ಧಾರದ ವೈದಿಕ ಕಾರ್ಯಕ್ರಮಗಳು ನಡೆದವು. ಕೃಷ್ಣಪ್ರಸಾದ್ ಬೆಟ್ಟಂಪಾಡಿ ಕಾರ್ಯಕ್ರಮ ನಿರೂಪಿಸಿದರು.