





ಪುತ್ತೂರು: ದಾರಂದಕುಕ್ಕು ಸಮೀಪ ನಡೆದ ಬೈಕ್ ಮತ್ತು ಬಸ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿಗಳಾದ ಬೆಳ್ಳಿಪ್ಪಾಡಿಯ ನಿಶಾಂತ್ ಮತ್ತು ಕಾರ್ತಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪುತ್ತೂರು ವಿಶ್ವ ಹಿಂದೂ ಪರಿಷದ್ ಬಜರಂಗದಳ ಇದರ ಸೇವಾ ಪ್ರಕಲ್ಪವಾದ ವಜ್ರತೇಜಸ್ ತಂಡ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ವಜ್ರತೇಜಸ್ ವಾಟ್ಸ್ ಆಪ್ ಗ್ರೂಪ್ ನಲ್ಲಿ ಸಂಗ್ರಹವಾದ ಮೊದಲ ಕಂತಿನ ಮೊತ್ತವನ್ನು ಅವರ ಮನೆಯವರಿಗೆ ಹಸ್ತಾಂತರಿಸಿದರು.



ಈ ಸಂದರ್ಭದಲ್ಲಿ ವಜ್ರತೇಜಸ್ ಇದರ ಅಧ್ಯಕ್ಷ ಮುರಳೀಕೃಷ್ಣ ಹಸಂತಡ್ಕ,ವಿಶ್ವ ಹಿಂದೂ ಪರಿಷದ್ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್,ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ,ವಜ್ರತೇಜಸ್ ಕಾರ್ಯದರ್ಶಿ ಸಚಿನ್ ಶೆಣೈ,ವಜ್ರತೇಜಸ್ ಕೋಶಾಧಿಕಾರಿ ಗಣೇಶ್ ಕಾಮತ್, ವಜ್ರತೇಜಸ್ ಇದರ ಸಕ್ರಿಯ ಸದಸ್ಯರಾದ ಡಾ.ಪ್ರದೀಪ್ ಬೊರ್ಕರ್,ಡಾ.ಸುರೇಶ್ ಪುತ್ತೂರಾಯ ಮತ್ತು ಸೇಶಪ್ಪ ಬೆಳ್ಳಿಪ್ಪಾಡಿ,ಭರತ್ ಚನಿಲ ಉಪಸ್ಥಿತರಿದ್ದರು.







            







