ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳಿಂದ ‘ರಾಮಾಯಣ – ಮಹಾಭಾರತ’ ಪರೀಕ್ಷೆಯಲ್ಲಿ ಉತ್ತಮ ಸಾಧನೆ

0

ಪುತ್ತೂರು: ಭಾರತ ಸಂಸ್ಕೃತಿ ಪ್ರತಿಷ್ಠಾನದ ವತಿಯಿಂದ ನಡೆದ ‘ರಾಮಾಯಣ – ಮಹಾಭಾರತ’ ಪರೀಕ್ಷೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.

ಈ ಪರೀಕ್ಷೆಯಲ್ಲಿ ಪಾಲ್ಗೊಂಡ ಎಲ್ಲಾ 47 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಅದರಲ್ಲಿ 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 8ನೇ ತರಗತಿಯ ಅರುಷಿ ಪುತ್ತೂರಾಯ (ಡಾ. ಸುರೇಶ್ ಪುತ್ತೂರಾಯ ಮತ್ತು ಡಾ. ಆಶಾ ಜ್ಯೋತಿ ಕೆ. ದಂಪತಿ ಪುತ್ರಿ ) 100ಕ್ಕೆ100 ಅಂಕಗಳನ್ನು ಹಾಗೂ 9ನೇ ತರಗತಿಯ ಧನ್ಯಶ್ರೀ ( ಪ್ರಕಾಶ್ ಎಚ್.ಕೆ ಮತ್ತು ಮಾಲಿನಿ ಕೆ.ಎನ್ ದಂಪತಿ ಪುತ್ರಿ )100ಕ್ಕೆ 90 ಅಂಕಗಳನ್ನು ಗಳಿಸಿ ಪದಕಕ್ಕೆ ಭಾಜನರಾಗಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here