ಪುತ್ತೂರು: ತೋಟಗಾರಿಕ ಇಲಾಖೆ ಪುತ್ತೂರು ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪುತ್ತೂರು ,ಅನುಗ್ರಹ ಸಂಜೀವಿನಿ ಒಕ್ಕೂಟ ಒಳಮೊಗ್ರು ಮತ್ತು ಗ್ರಾಮ ಪಂಚಾಯತ್ ಒಳಮೊಗ್ರು ಇದರ ಸಹಯೋಗದೊಂದಿಗೆ ಅಣಬೆ ಕೃಷಿ ತರಬೇತಿ ಕಾರ್ಯಾಗಾರ ಜ.13 ರಂದು ಬೆಳಿಗ್ಗೆ ಕುಂಬ್ರದಲ್ಲಿ ಗ್ರಾಮ ಪಂಚಾಯತ್ ನ ಹಳೆ ಕಟ್ಟಡದ ವಠಾರದಲ್ಲಿ ಜರಗಲಿರುವುದು.
ಆಸಕ್ತ ರೈತರು ಮತ್ತು ಗ್ರಾಮಸ್ಥರು ತರಬೇತಿ ಯನ್ನು ಪಡೆದುಕೊಳ್ಳುವಂತೆ ಒಳಮೊಗ್ರೂ ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ ಹಾಗೂ ಆಡಳಿತ ಮಂಡಳಿ ಉಪಾಧ್ಯಕ್ಷರು ,ಸದಸ್ಯರುಗಳ ಮತ್ತು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.