ಆಶೀರ್ವಾದ ಗೋಲ್ಡ್ ಅಂಡ್ ಡೈಮಂಡ್ಸ್‌ನ ಎರಡನೇ ಸೀಸನ್‌ನ ಪ್ರಥಮ ‘ಫ್ರೀ ಡ್ರಾ’- ಒಂದು ನೆಕ್ಲೆಸ್, ಒಂದು ಬೈಕ್, 10 ಚಿನ್ನದ ಉಂಗುರ, 30 ಸರ್‌ಪ್ರೈಸ್ ಬಹುಮಾನ

0

ಪುತ್ತೂರು: ಸಾವಿರಾರು ಗ್ರಾಹಕರ ಪ್ರೀತಿ ಸಂಪಾದಿಸಿಕೊಂಡು, ಕಳೆದ ಹಲವಾರು ವರ್ಷಗಳಿಂದ ನಿಸ್ವಾರ್ಥ ಸೇವೆಯನ್ನು ತನ್ನ ಗ್ರಾಹಕರಿಗೆ ನೀಡುತ್ತಿದ್ದು, ಕರ್ನಾಟಕ-ಕೇರಳದ ಗಡಿ ಭಾಗ ಸೇರಿದಂತೆ ವಿದೇಶದಲ್ಲಿಯೂ ಸಂತೃಪ್ತ ಗ್ರಾಹಕರನ್ನು ಹೊಂದಿರುವ ದರ್ಬೆಯಲ್ಲಿರುವ ಆಶೀರ್ವಾದ್ ಎಂಟರ್‌ಪ್ರೈಸಸ್ ಮಧ್ಯಮವರ್ಗದವರ ಕನಸನ್ನು ನನಸು ಮಾಡುವ ಸುವರ್ಣಾವಕಾಶವನ್ನು ಒದಗಿಸಲು ಆಯೋಜನೆ ಮಾಡಿರುವ ಲಕ್ಕೀ ಸ್ಕೀಂನ ಎರಡನೇ ಸೀಸನ್‌ನ ಪ್ರಥಮ ಫ್ರೀ ಡ್ರಾ. ಇತ್ತೀಚೆಗೆ ನಡೆಯಿತು.


ಮೊದಲನೇ ಸೀಸನ್ ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಎರಡನೇ ಸೀಸನ್ ಆರಂಭಗೊಳಿಸಿತ್ತು. ಪ್ರಥಮ ಯೋಜನೆಯ ಲಕ್ಕಿ ಡ್ರಾ.ದಲ್ಲಿ ಇಬ್ಬರಿಗೆ ಎರಡು ಬೈಕ್ ಮತ್ತು ಇಬ್ಬರು ಅದೃಷ್ಟಶಾಲಿಗಳಿಗೆ ಚಿನ್ನ ಗೆಲ್ಲುವ ಅವಕಾಶವನ್ನು ನೀಡಿತ್ತು. ಇದೀಗ ಆಶೀರ್ವಾದ ಗೋಲ್ಡ್ ಅಂಡ್ ಡೈಮಂಡ್ಸ್‌ನ ಎರಡನೇ ಸೀಸನ್‌ನ ಪ್ರಥಮ ಫ್ರೀ ಡ್ರಾ. ನಡೆದಿದ್ದು ಒಬ್ಬರಿಗೆ ರೂ.50ಸಾವಿರ ಮೌಲ್ಯದ ಚಿನ್ನದ ನೆಕ್ಲೆಸ್, ಒಬ್ಬರಿಗೆ ಬೈಕ್ ಹಾಗೂ 10 ಜನರಿಗೆ ಚಿನ್ನದ ಉಂಗುರ, 30 ಜನರಿಗೆ ಸರ್‌ಪ್ರೈಸ್ ಗಿಫ್ಟ್ ನೀಡಿದೆ.

ನೆಕ್ಲೆಸ್ ವಿಜೇತರಾಗಿ ಸತೀಶ್ ಕಾಣಿಯೂರು, ಸುಧಾಕರ ಸಂಪ್ಯ ಹೋಂಡಾ ಎಸ್‌ಪಿ 125 ಬೈಕ್ ವಿಜೇತರಾದರು. ಅಲ್ಲದೆ 10 ಮಂದಿ ಚಿನ್ನದ ಉಂಗುರ ಹಾಗೂ 30 ಮಂದಿ ಸರ್‌ಪ್ರೈಸ್ ಬಹುಮಾನ ವಿಜೇತರಾದರು. ಎಲ್ಲಾ ವಿಜೇತರಿಗೆ ಬಹುಮಾನ ಹಸ್ತಾಂತರಿಸಲಾಯಿತು. ಆಶೀರ್ವಾದ್ ಎಂಟರ್‌ಪ್ರೈಸಸ್‌ನ ಮಾಲಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here