ಪುಣಚ: ಪುಣಚ ದೇವಿನಗರ ಶ್ರೀ ಆದಿಶಕ್ತಿ ಮಹಮ್ಮಾಯಿ ಜೈ ಭಾರತಿ ಮರಾಟಿ ಸಂಘದ ಆರಾಧನಾ ಮಂದಿರದಲ್ಲಿ ಫೆ.28ರಂದು ನಡೆಯಲಿರುವ ಅರ್ಧ ಏಕಾಹ ಭಜನೆ ಹಾಗೂ ಶ್ರೀ ಮಹಮ್ಮಾಯಿ ಅಮ್ಮನವರ ಅಂಗಾರೆ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸಂಘದ ವಠಾರದಲ್ಲಿ ಜ.12ರಂದು ನಡೆಯಿತು.
ಶ್ರೀ ಮಹಮ್ಮಾಯಿ ಜೈ ಭಾರತಿ ಮರಾಟಿ ಸಂಘದ ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರು, ಪೂಜಾಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.