ಕುಂಬ್ರ ಗ್ರಾಮಾಂತರ ಉಪವಿಭಾಗ ಕಛೇರಿಯಲ್ಲಿ ಮೆಸ್ಕಾಂ ಜನ ಸಂಪರ್ಕ ಸಭೆ

0

ಹಳೆಯ ತಂತಿ ಬದಲಾವಣೆಗೆ ಗ್ರಾಹಕರಿಂದ ಮನವಿ

ಪುತ್ತೂರು: ಮೆಸ್ಕಾಂನ ಪುತ್ತೂರು ಗ್ರಾಮಾಂತರ ಹಾಗೂ ನಗರ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯು ಜ.13 ರಂದು ಕುಂಬ್ರದಲ್ಲಿರುವ ಮೆಸ್ಕಾಂ ಗ್ರಾಮಾಂತರ ಉಪವಿಭಾಗ ಕಛೇರಿಯಲ್ಲಿ ನಡೆಯಿತು.

ಮೆಸ್ಕಾಂ ಮಂಗಳೂರು ವೃತ್ತ ಕಛೇರಿಯ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಕೆ.ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಶಂಕರ್ ಸಿ.ಎಚ್ ಸೇರಿದಂತೆ ಸಹಾಯಕ ಇಂಜಿನಿಯರ್‌ಗಳಾದ ಗುರುದೇವಿ ಮಂತ್ರಣ್ಣನವರ್, ಪುತ್ತೂರು ನಗರ ಸಹಾಯಕ ಇಂಜಿನಿಯರ್ ರಾಜೇಶ್, ಪುತ್ತೂರು ಶಾಖಾಧಿಕಾರಿ ರಮೇಶ್, ಸಹಾಯಕ ಇಂಜಿನಿಯರ್ ಸ್ಮಿತಾ, ಸಹಾಯಕ ಲೆಕ್ಕಾಧಿಕಾರಿ ರಜನಿ, ಸಹಾಯಕ ಲೆಕ್ಕಾಧಿಕಾರಿ ಸಂಜೀವ, ಕಿರಿಯ ಇಂಜಿನಿಯರ್‌ಗಳಾದ ಕುಂಬ್ರದ ರವೀಂದ್ರ, ಬೆಟ್ಟಂಪಾಡಿಯ ಪುತ್ತು, ಈಶ್ವರಮಂಗಲದ ರಮೇಶ್, ಸವಣೂರು ರಾಜೇಶ್ ಉಪಸ್ಥಿತರಿದ್ದರು.


ಒಟ್ಟು 40 ಮನವಿಗಳು ಬಂದಿದ್ದು ಇದರಲ್ಲಿ ಹೆಚ್ಚಿನ ಮನವಿಗಳು ಹಳೆಯ ತಂತಿ ಬದಲಾವಣೆಗೆ ಸಂಬಂಧಿಸಿದ್ದು ಆಗಿವೆ. ಮಾಡಾವುಸಂಪಾಜೆ, ಪಲ್ಲತ್ತಡ್ಕ, ಮುಗೇರು, ಉರ್ವ ಈ ಮೂರು ಕಡೆಗಳಲ್ಲಿ ಹೆಚ್ಚುವರಿ ಪರಿವರ್ತಕ ಅಳವಡಿಕೆಗೆ ಮನವಿ ಬಂದಿದೆ. ಸಭೆಯಲ್ಲಿ ಒಳಮೊಗ್ರು, ಕೆಯ್ಯೂರು, ಮಾಡಾವು, ಬಡಗನ್ನೂರು ಇತ್ಯಾದಿ ಕಡೆಗಳ ವಿದ್ಯುತ್ ಬಳಕೆದಾರರು ಭಾಗವಹಿಸಿದ್ದರು. ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ನಡೆದ ಸಭೆಯಲ್ಲಿ ವಿದ್ಯುತ್ ಬಳಕೆದಾರರು ಕಛೇರಿಯಲ್ಲಿ ಖುದ್ದಾಗಿ ಹಾಜರಿದ್ದು ಹಾಗೂ ದೂರವಾಣಿ ಮೂಲಕ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.


LEAVE A REPLY

Please enter your comment!
Please enter your name here