ನವಶಕ್ತಿ ಯುವಕ ಮಂಡಲ ನಮ್ಮೂರ ಹೆಮ್ಮೆ- ಭಾಸ್ಕರ ಕರ್ಕೇರ
ನಿಡ್ಪಳ್ಳಿ; ನವಶಕ್ತಿ ಯುವಕ ಮಂಡಲ ನಮ್ಮ ಊರಿನ ಹೆಮ್ಮೆ.ಈ ಶಾಲೆಯ ಆವರಣದಲ್ಲಿ ಯಾವುದೇ ಚಟುವಟಿಕೆಗಳ ಜೊತೆಗೆ ನಿಲ್ಲುವವರು ಮತ್ತು ಮೊನ್ನೆ ನಡೆದ ವಾರ್ಷಿಕೋತ್ಸವದ ಯಶಸ್ಸಿನಲ್ಲಿಯೂ ಕೈ ಜೋಡಿಸಿದ ಈ ಯುವಕ ಮಂಡಲವು ಇನ್ನಷ್ಟು ಯಶಸ್ಸನ್ನು ಗಳಿಸಲಿ’ ಎಂದು ಮುಂಡೂರು ಶಾಲಾ ಎಸ್.ಡಿ. ಎಂ.ಸಿ ಅಧ್ಯಕ್ಷ ಭಾಸ್ಕರ ಕರ್ಕೇರ ಹೇಳಿದರು.
ಅವರು ಜ.11 ರಂದು ಮುಂಡೂರು ಶಾಲಾ ವಠಾರದಲ್ಲಿ ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ ‘ ಕೇರಳ ಗಡಿ ಭಾಗದ ಈ ಪ್ರದೇಶದಲ್ಲಿ ಒಂದು ಯುವಕ ಮಂಡಲವನ್ನು ಕಟ್ಟಿ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿರುವ ಯುವಕ ಮಂಡಲಕ್ಕೆ ಅಭಿನಂದನೆ ಸಲ್ಲಿಸಿದರು. ಇಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳು ಆಯೋಜನೆಯಾಗಿ ಹತ್ತು ಜನರ ಬಾಯಿಯಲ್ಲಿ ಯುವಕ ಮಂಡಲದ ಹೆಸರು ಚಿರಸ್ಥಾಯಿಯಾಗಲಿ ಎಂದು ಶುಭ ಹಾರೈಸಿದರು.
ಯುವಕ ಮಂಡಲದ ಗೌರವಾಧ್ಯಕ್ಷ ವೆಂಕಟರಮಣ ಬೊರ್ಕರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯತ್ ಸದಸ್ಯೆ ನಂದಿನಿ ಅರ್ ರೈ , ಜೈ ಭೀಮ್ ಟ್ರಸ್ಟ್ ನ ಮಹೇಶ್ ಕೆ ,ಮುಂಡೂರು ಶಾಲಾ ಮುಖ್ಯ ಶಿಕ್ಷಕಿ ಆಶಾ ಶುಭ ಹಾರೈಸಿದರು. ಯುವಕ ಮಂಡಲದ ಗೌರವ ಸಲಹೆಗಾರ ಶ್ರೀಧರ್ ಭಟ್ ಬಂಟಾಜೆ, ದನಿ ಸುಬ್ಬಣ್ಣ ನುಳಿಯಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೈಭವ್ ವಂದಿಸಿ,ಯುವಕ ಮಂಡಲದ ಗೌರವಾಧ್ಯಕ್ಷ ವೆಂಕಟ್ರಮಣ ಬೊರ್ಕರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಜನಾರ್ಧನ ದುರ್ಗ ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲದ ಸದಸ್ಯರು ಸಹಕರಿಸಿದರು.
ಸನ್ಮಾನ ಕಾರ್ಯಕ್ರಮ; ಜಾವಲಿನ್ ನಲ್ಲಿ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ ಸರಕಾರಿ ಪದವಿಪೂರ್ವ ಕಾಲೇಜು ಬೆಟ್ಟಂಪಾಡಿಯ ವಿದ್ಯಾರ್ಥಿನಿ ರೀತಶ್ರೀ, ಹಾಗೂ ಕಲಿಕೆಯಲ್ಲಿ ವಿಶೇಷ ಸಾಧನೆ ಮಾಡಿದ ಪ್ರಥಮ್ ಸಿ. ಎನ್ ಹಾಗೂ ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು ಇಲ್ಲಿಯ ಹರ್ಷಿತ್.ಎಂ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.
ನವಶಕ್ತಿ ಚಾಂಪಿಯನ್ ಟ್ರೋಫಿ ವಿಜೇತರು;
ಲೆವೆಲ್ ಮಾದರಿ ವಿಭಾಗದಲ್ಲಿ -ಟೈಟಾನ್ಸ್ ನೀರ್ಕಜೆ ಪ್ರಥಮ, ಟೀಮ್ ಜಟಾಯು ದ್ವಿತೀಯ, ಭಾರತಿ ಫ್ರೆಂಡ್ಸ್ ಕುಡ್ಪುಲ್ತಡ್ಕ ತೃತೀಯ ಹಾಗೂ ನವಶಕ್ತಿ ಮುಂಡೂರು ಚತುರ್ಥ ಬಹುಮಾನ ಪಡೆದುಕೊಂಡರು.
ಗ್ರಿಪ್ ಮಾದರಿ ವಿಭಾಗದಲ್ಲಿ
ಸ್ವಾಮಿ ಕೊರಗಜ್ಜ ಪಾಲಡ್ಕ ಪ್ರಥಮ, ವಿಷ್ಣು ಬಳಗ ಅಡ್ಕ ‘ಬಿ’ ದ್ವಿತೀಯ, ವಿಷ್ಣು ಬಳಗ ಅಡ್ಕ ಎ ತೃತೀಯ ಹಾಗೂ ಸ್ವಾಮಿ ಕೊರಗಜ್ಜ ಬಂಗಾಡಿ ಚತುರ್ಥ ಬಹುಮಾನ ಪಡೆದುಕೊಂಡರು.
ಸ್ಥಳೀಯ ಮಹಿಳೆಯರಿಗೆ ನಡೆದ ಸ್ಪರ್ಧೆಯಲ್ಲಿ ತೇಜಸ್ವಿನಿ ಮತ್ತು ತಂಡ ಪ್ರಥಮ ಹಾಗೂ ಶಶಿಕಲಾ ಮತ್ತು ತಂಡ ದ್ವಿತೀಯ ಸ್ಥಾನ ಪಡೆದುಕೊಂಡರು.