ಪುತ್ತೂರು ಪಿಎಲ್‌ಡಿ ಬ್ಯಾಂಕ್ 14 ಸ್ಥಾನಗಳಿಗೂ ಅವಿರೋಧ ಆಯ್ಕೆ

0

12ರಲ್ಲಿ ಸಹಕಾರ ಭಾರತಿ, 2ರಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಅವಕಾಶ

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕಿನ 68 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಪುತ್ತೂರು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್ ಡಿ) ಬ್ಯಾಂಕ್‌ಗೆ ಮುಂದಿನ 5 ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಯ 14 ಸ್ಥಾನಗಳಲ್ಲಿ 12 ಸ್ಥಾನಗಳಲ್ಲಿ ಸಹಕಾರ ಭಾರತಿ ಹಾಗೂ 2 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಘು ಎಸ್.ಎಂ.ರವರು ತಿಳಿಸಿದ್ದಾರೆ.

ಅವಿರೋಧವಾಗಿ ಆಯ್ಕೆಯಾದವರು:

ನೆಲ್ಯಾಡಿ(ಸಾಮಾನ್ಯ)-ಹಾಲಿ ಅಧ್ಯಕ್ಷ ಸಹಕಾರ ಭಾರತಿಯ ಭಾಸ್ಕರ ಎಸ್ ಗೌಡ ಇಚ್ಲಂಪಾಡಿ,ಪುತ್ತೂರು(ಸಾಮಾನ್ಯ)-ಸಹಕಾರ ಭಾರತಿಯ ಸುಜಾತ ರಂಜನ್ ರೈ ಬೀಡು,ಸಾಲಗಾರರಲ್ಲದ ಕ್ಷೇತ್ರದಿಂದ(ಸಾಮಾನ್ಯ)-ಸಹಕಾರ ಭಾರತಿಯ ಯುವರಾಜ್ ಪೆರಿಯತ್ತೋಡಿ,ಕೆದಂಬಾಡಿ(ಸಾಮಾನ್ಯ)- ಸಹಕಾರ ಭಾರತಿಯ ಯತೀಂದ್ರ ಕೊಚ್ಚಿ,ಬೆಟ್ಟಂಪಾಡಿ(ಸಾಮಾನ್ಯ)-ಸಹಕಾರ ಭಾರತಿಯ ಪ್ರವೀಣ್ ರೈ ಪಂಜೊಟ್ಟು, ಅರಿಯಡ್ಕ(ಸಾಮಾನ್ಯ)-ಕಾಂಗ್ರೆಸ್ ಬೆಂಬಲಿತ ವಿಕ್ರಮ್ ರೈ ಸಾಂತ್ಯ, ಕೋಡಿಂಬಾಡಿ(ಸಾಮಾನ್ಯ)-ಸಹಕಾರ ಭಾರತಿಯ ಬಾಳಪ್ಪ ಯಾನೆ ಸುಂದರ ಪೂಜಾರಿ ಬಡಾವು, ಬೆಳಂದೂರು(ಮಹಿಳೆ)-ಸಹಕಾರ ಭಾರತಿಯ ಚಂದ್ರಾವತಿ ಅಭಿಕಾರ್, ಕಡಬ(ಮಹಿಳೆ)-ಸಹಕಾರ ಭಾರತಿಯ ಸ್ವಾತಿ ರೈ ಆರ್ತಿಲ, ನರಿಮೊಗರು(ಪರಿಶಿಷ್ಟ ಜಾತಿ)-ಸಹಕಾರ ಭಾರತಿಯ ಬಾಬು ಮುಗೇರ, ಬಲ್ಯ(ಹಿಂದುಳಿದ ವರ್ಗ ಎ)-ಸಹಕಾರ ಭಾರತಿಯ ರಾಜು ಮೋನು ಪಿ.ಉಳಿಪು, ಉಪ್ಪಿನಂಗಡಿ(ಸಾಮಾನ್ಯ)-ಸಹಕಾರ ಭಾರತಿಯ ಕುಶಾಲಪ್ಪ ಗೌಡ ಅನಿಲ, ಅಲಂಕಾರು(ಪ.ಪಂಗಡ)-ಕಾಂಗ್ರೆಸ್ ಬೆಂಬಲಿತ ನಾರಾಯಣ ನಾಯ್ಕ ಏಣಿತ್ತಡ್ಕ, ಬಂಟ್ರ(ಹಿಂದುಳಿದ ವರ್ಗ ಬಿ)-ಸಹಕಾರ ಭಾರತಿಯಿಂದ ಚೆನ್ನಕೇಶವ ರವರು ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.


ಜ.11ರಂದು ನೆಲ್ಯಾಡಿ(ಸಾಮಾನ್ಯ), ಸಾಲಗಾರರಲ್ಲದ ಕ್ಷೇತ್ರ(ಸಾಮಾನ್ಯ),ಬೆಳಂದೂರು(ಮಹಿಳೆ),ಕಡಬ(ಮಹಿಳೆ),ನರಿಮೊಗರು(ಪ.ಜಾತಿ)ಹಾಗೂ ಬಲ್ಯ(ಹಿಂದುಳಿದ ವರ್ಗ)ಕ್ಷೇತ್ರಗಳಲ್ಲಿ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದ ಕಾರಣ ಅವಿರೋಧ ಆಯ್ಕೆ ಆಗಿತ್ತು. ಕೋಡಿಂಬಾಡಿ ವಲಯ (ಸಾಮಾನ್ಯ)ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಜಶೇಖರ ಜೈನ್ ನೀರ್ಪಾಜೆ ಹೊಸಮನೆ, ಬಂಟ್ರ ವಲಯ(ಹಿಂದುಳಿದ ವರ್ಗ ಬಿ)ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಚಂದ್ರಶೇಖರ್ ಗೌಡ ಹಾಗೂ ಕೆದಂಬಾಡಿ ವಲಯ(ಸಾಮಾನ್ಯ)ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಶೋಕ್ ರೈ ದೇರ್ಲರವರ ನಾಮಪತ್ರ ಜ.12ರಂದು ತಿರಸ್ಕೃತಗೊಂಡಿದ್ದರಿಂದ ಕೋಡಿಂಬಾಡಿ ವಲಯ(ಸಾಮಾನ್ಯ)ದಿಂದ ಸಹಕಾರ ಭಾರತಿಯ ಬಾಳಪ್ಪ ಯಾನೆ ಸುಂದರ ಪೂಜಾರಿ, ಬಂಟ್ರ ವಲಯ(ಹಿಂದುಳಿದ ವರ್ಗ ಬಿ)ದಿಂದ ಸಹಕಾರ ಭಾರತಿಯ ಚೆನ್ನಕೇಶವ ಕೈಂತಿಲ ಹಾಗೂ ಕೆದಂಬಾಡಿ ವಲಯ(ಸಾಮಾನ್ಯ)ದಿಂದ ಸಹಕಾರ ಭಾರತಿಯ ಯತೀಂದ್ರ ಕೊಚ್ಚಿರವರು ಅವಿರೋಧವಾಗಿ ಆಯ್ಕೆಗೊಂಡರು.


ಜ.13ರಂದು ನಾಮಪತ್ರ ಹಿಂತೆಗೆಯಲು ಕೊನೆಯ ದಿನವಾಗಿತ್ತು. ಅರಿಯಡ್ಕ ವಲಯ(ಸಾಮಾನ್ಯ)ದಿಂದ ನಾಮಪತ್ರ ಸಲ್ಲಿಸಿದ್ದ ಸಹಕಾರ ಭಾರತಿಯ ಹರೀಶ್ ರೈ ಜಾರತ್ತಾರು, ಉಪ್ಪಿನಂಗಡಿ ವಲಯ(ಸಾಮಾನ್ಯ)ದಿಂದ ಕಾಂಗ್ರೆಸ್ ಬೆಂಬಲಿತ ಶಶಿರಾಜ್ ರೈ, ಪುತ್ತೂರು ವಲಯ(ಸಾಮಾನ್ಯ) ಕಾಂಗ್ರೆಸ್ ಬೆಂಬಲಿತ ವಾಸುದೇವ ಮಯ್ಯ, ಬೆಟ್ಟಂಪಾಡಿ ವಲಯ(ಸಾಮಾನ್ಯ)ಕಾಂಗ್ರೆಸ್ ಬೆಂಬಲಿತ ಭಾಸ್ಕರ ಕರ್ಕೇರ ಹಾಗೂ ಆಲಂಕಾರು ವಲಯ(ಪರಿಶಿಷ್ಠ ಪಂಗಡ)ಕ್ಷೇತ್ರದಿಂದ ಸಹಕಾರ ಭಾರತಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಾಮ ನಾಯ್ಕರವರು ನಾಮ ಪತ್ರ ಹಿಂತೆಗೆದುಕೊಂಡ ಪರಿಣಾಮ ಈ ಕ್ಷೇತ್ರಗಳಿಗೂ ಅವಿರೋಧ ಆಯ್ಕೆ ನಡೆಯಿತು.


ಬ್ಯಾಂಕಿನ 14 ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದ ಬಳಿಕ ಉಳಿದ 5 ಸ್ಥಾನಗಳಿಗೆ ಸಹಕಾರ ಭಾರತಿ ಮತ್ತು ಕಾಂಗ್ರೆಸ್ ಬೆಂಬಲಿತರಾಗಿ ತಲಾ 5 ಮಂದಿ ಅಭ್ಯರ್ಥಿಗಳು ಇದ್ದರು. ಬಳಿಕದ ಬೆಳವಣಿಗೆಯಲ್ಲಿ, ಸಹಕಾರ ಭಾರತಿ ಮತ್ತು ಕಾಂಗ್ರೆಸ್ ಮುಖಂಡರುಗಳ ನಡುವೆ ಮಾತುಕತೆ ನಡೆದು 5 ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಕಾಂಗ್ರೆಸ್ ಹಾಗೂ ಮೂರು ಸ್ಥಾನಗಳನ್ನು ಸಹಕಾರ ಭಾರತಿ ಅಭ್ಯರ್ಥಿಗಳಿಗೆ ಬಿಟ್ಟುಕೊಡುವ ತೀರ್ಮಾನಕ್ಕೆ ಬರಲಾಯಿತು. ಅದರಂತೆ, ಉಪ್ಪಿನಂಗಡಿ, ಬೆಟ್ಟಂಪಾಡಿ ಹಾಗೂ ಪುತ್ತೂರು ವಲಯದ ಸ್ಥಾನಗಳನ್ನು ಸಹಕಾರ ಭಾರತಿ ಅಭ್ಯರ್ಥಿಗಳಿಗೆ ಮತ್ತು ಅರಿಯಡ್ಕ ಹಾಗೂ ಆಲಂಕಾರು ವಲಯ ಸ್ಥಾನಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳಿಗೆ ನೀಡಲಾಯಿತು.


22ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ: ನೂತನ ಆಡಳಿತ ಮಂಡಳಿ ಅಧ್ಯಕ್ಷ,ಉಪಾಧ್ಯಕ್ಷ ಮತ್ತು ಕೋಶಾಧಿಕಾರಿಯ ಆಯ್ಕೆ ಜ.22ರಂದು ನಡೆಯಲಿದೆ.

LEAVE A REPLY

Please enter your comment!
Please enter your name here