ಅರಿಯಡ್ಕ: ಸ್ಪಂದನಾ ಸೇವಾ ಬಳಗ ರಿ. ಕುಂಬ್ರ ಇದರ ನೇತೃತ್ವದಲ್ಲಿ ಜನವರಿ 26ರಂದು ಕುಂಬ್ರ ಆಲಂಗಾರು ಗದ್ದೆಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾ ವಾರ್ಷಿಕೋತ್ಸವ ಅಂಗವಾಗಿ ಧರ್ಮ ಜಾಗೃತಿಗಾಗಿ ರಾಮ ಸಂಕೀರ್ತನೆ ನಾಮಧೇಯದೊಂದಿಗೆ ನಡೆಯಲಿರುವ ಶ್ರೀ ರಾಮ ಲೀಲೋತ್ಸವ ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಜ.13 ರಂದು ಶ್ರೀ ಕೃಷ್ಣ ಭಜನಾ ಮಂದಿರ ರಿ. ಕೌಡಿಚ್ಚಾರ್-ಅರಿಯಡ್ಕ ಇದರ ಅಧ್ಯಕ್ಷ ರಾಮದಾಸ್ ರೈ ಮದ್ಲ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸ್ಪಂದನಾ ಸೇವಾ ಬಳಗ ಕುಂಬ್ರ ಇದರ ಅಧ್ಯಕ್ಷ ರತನ್ ರೈ ಕುಂಬ್ರ, ಉಪಾಧ್ಯಕ್ಷ ರಾಜೇಶ್ ರೈ ಪರ್ಪುಂಜ, ಮತ್ತು ಸಂತೋಷ್ ಮಣಿಯಾಣಿ ಕುತ್ಯಾಡಿ, ಕಾರ್ಯಾಧ್ಯಕ್ಷ ಅಶೋಕ್ ತ್ಯಾಗ ರಾಜೆ, ಗೌರವ ಸಲಹೆಗಾರರಾದ ತಿಲಕ್ ರೈ ಕುತ್ಯಾಡಿ, ಸದಸ್ಯರಾದ ಹರಿಪ್ರಸಾದ್ ಎಂ ಎಸ್ ಮಾಯಿಲ ಕೊಚ್ಚಿ, ಚಿರಾಗ್ ಬೆಂದ್ರುಮಾರು,ಯುವರಾಜ್ ಪೂಂಜಾ ಗೋಳ್ತಿಲ, ಶ್ರೀ ಕೃಷ್ಣ ಭಜನಾ ಮಂದಿರದ ಉಪಾಧ್ಯಕ್ಷರಾದ ಸದಾಶಿವ ಮಣಿಯಾಣಿ ಕುತ್ಯಾಡಿ, ವಿಶ್ವನಾಥ ರೈ ಕುತ್ಯಾಡಿ ಮತ್ತು ಕುಶಾಲಪ್ಪ ಗೌಡ ಮಡ್ಯಂಗಳ, ಪ್ರಧಾನ ಕಾರ್ಯದರ್ಶಿ ದೀಪಕ್ ಕುಲಾಲ್ ಆಕಾಯಿ, ಕಾರ್ಯದರ್ಶಿ ಕೊರಗಪ್ಪ ಗೌಡ ಮಡ್ಯಂಗಳ, ಭಜನಾ ಸಂಕೀರ್ತನೆ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಕುತ್ಯಾಡಿ, ಸದಸ್ಯರಾದ ಚಂದ್ರ ಕುತ್ಯಾಡಿ, ಪ್ರತೀಕ್ ಆಕಾಯಿ, ಕರುಣಾಕರ ಗೌಡ, ವಸಂತ್ ಕುಮಾರ್ ಕೌಡಿಚ್ಚಾರು, ಜಗದೀಶ್ ನಾಯ್ಕ ಬೇಂಗತ್ತಡ್ಕ, ಅನೂಪ್ ಕೃಷ್ಣ ರೈ ಕುತ್ಯಾಡಿ, ಜಯಪ್ರಕಾಶ್ ಕುತ್ಯಾಡಿ, ಹೊನ್ನಪ್ಪ ನಾಯ್ಕ, ಗಂಗಾಧರ ನಾಯ್ಕ ಮಡ್ಯಂಗಳ ಮೋನಪ್ಪ ಕುಲಾಲ್, ಚೇತನ್, ಪ್ರದೀಪ್ ಹೊಸ ಗದ್ದೆ,ಮೋಹನ ಮಣಿಯಾಣಿ ಕುತ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಜಾರತ್ತಾರು ಸ್ವಾಗತಿಸಿ ವಂದಿಸಿದರು