ನೌಶದ್ ಹಿಮಮಿ ಸಖಾಫಿ ಸಂಪ್ಯ ಅಧ್ಯಕ್ಷ, ಖಾದರ್ ಫಾಝಿಲ್ ಬನ್ನೂರು ಕಾರ್ಯದರ್ಶಿ
ಪುತ್ತೂರು: ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಇದರ ಅಧ್ಯಕ್ಷರಾಗಿ ನೌಶದ್ ಹಿಮಮಿ ಸಖಾಫಿ ಸಂಪ್ಯ, ಪ್ರಧಾನ ಕಾರ್ಯದರ್ಶಿಯಾಗಿ ಖಾದರ್ ಫಾಝಿಲ್ ಬನ್ನೂರು ಅವರು ಆಯ್ಕೆಗೊಂಡಿದ್ದಾರೆ.
ಪಡೀಲ್ ಸುನ್ನೀ ಸೆಂಟರ್‌ನಲ್ಲಿ ಜ.12ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸೆಕ್ಟರ್ ಅಧ್ಯಕ್ಷ ಹಾರಿಸ್ ಸುರೈಜಿ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಮಹಾಸಭೆಯು ನಡೆಯಿತು. ವೀಕ್ಷಕರಾಗಿ ಆಗಮಿಸಿದ ಡಿವಿಷನ್ ನಾಯಕರಾದ ಸಿನಾನ್ ಕಾಮಿಲ್ ಸಖಾಫಿ, ಸಲಾಂ ಹನೀಫಿ ಉಸ್ತಾದರು ಸಂಘಟನೆಯ ಮಹತ್ವದ ಕುರಿತು, ಸಂಘಟನೆಯ ಕಾರ್ಯ ವೈಖರಿಯ ಕುರಿತು ಮಾತನಾಡಿದರು.
ಕಾರ್ಯದರ್ಶಿ ರಫೀಕ್ ಕೆಮ್ಮಾಯಿ ವಾರ್ಷಿಕ ವರದಿ ವಾಚಿಸಿ ಕೋಶಾಧಿಕಾರಿ ನೌಶದ್ ಹಿಮಮಿ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಬಳಿಕ ಡಿವಿಷನ್ ನಾಯಕರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ರಫೀಕ್ ಕೆಮ್ಮಾಯಿ ಸ್ವಾಗತಿಸಿ, ಖಾದರ್ ಫಾಝಿಲ್ ಬನ್ನೂರು ವಂದಿಸಿದರು.
2025-26 ನೇ ಸಾಲಿನ ಪದಾಧಿಕಾರಿಗಳು:
ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್‌ನ ನೂತನ ಅಧ್ಯಕ್ಷರಾಗಿ ಶದ್ ಹಿಮಮಿ ಸಖಾಫಿ ಸಂಪ್ಯ, ಪ್ರಧಾನ ಕಾರ್ಯದರ್ಶಿಯಾಗಿ ಖಾದರ್ ಫಾಝಿಲ್ ಬನ್ನೂರು, ಉಪಾಧ್ಯಕ್ಷರಾಗಿ ರಫೀಕ್ ಕೆಮ್ಮಾಯಿ, ಕೋಶಾಧಿಕಾರಿಯಾಗಿ ರಾಶಿದ್ ಹಿಮಮಿ ಸಖಾಫಿ ಅಜ್ಜಿಕಟ್ಟೆ, ದಅವಾ ಕಾರ್ಯದರ್ಶಿಯಾಗಿ ಅಹ್ಮದ್ ಅಲ್ ಮದೀನಿ ಅಜ್ಜಿಕಟ್ಟೆ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಅಫ್ರೀಝ್ ಕೆಮ್ಮಾಯಿ, ರೈನ್ಬೋ ಕಾರ್ಯದರ್ಶಿಯಾಗಿ ಝುಬೈರ್ ಸಂಪ್ಯ, ಮೀಡಿಯಾ ಕಾರ್ಯದರ್ಶಿಯಾಗಿ ಬಿ.ಕೆ.ಸ್ವಾದಿಕ್ ಅಲಿ ಸಂಪ್ಯ, ಕ್ಯೂಡಿಯಾಗಿ ರಾಫಿ ಮುಸ್ಲಿಯಾರ್ ಬುಳೇರಿಕಟ್ಟೆ, ಜಿ.ಡಿಯಾಗಿ ಶಾಹುಲ್ ಹಮೀದ್ ಬನ್ನೂರು ಆಯ್ಕೆಗೊಂಡಿದ್ದು, ಸುಮಾರು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.