ಪುತ್ತೂರಿನಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡ ಶಿವಳ್ಳಿ ಕ್ರಿಕೆಟ್ ಲೀಗ್-ಸೀಸನ್ 5

0

ಪುತ್ತೂರು: ಶಿವಳ್ಳಿ ಕ್ರಿಕೆಟರ‍್ಸ್ ಪುತ್ತೂರು ಆಯೋಜಿಸಿರುವ 5ನೇ ವರ್ಷದ ಆಹ್ವಾನಿತ 12 ಶಿವಳ್ಳಿ ಬ್ರಾಹ್ಮಣರ ತಂಡಗಳ ಅಂತರ್ ರಾಜ್ಯ ಮಟ್ಟದ ಓವರ್ ಅರ್ಮ್ ಕ್ರಿಕೆಟ್ ಪಂದ್ಯಾಕೂಟ ‘ಶಿವಳ್ಳಿ ಕ್ರಿಕೆಟ್ ಲೀಗ್’ಸೀಸನ್-5 ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.


ಪಂದ್ಯಕೂಟವನ್ನು ಬ್ರಹ್ಮಶ್ರೀ ವೇ.ಮೂ.ರವೀಶ ತಂತ್ರಿ ಕುಂಟಾರು, ಬ್ರಹ್ಮಶ್ರೀ ಉದಯ ತಂತ್ರಿ ಕೆಮ್ಮಿಂಜೆ, ವೇ.ಮೂ.ಹರೀಶ ಬೈಪಾಡಿತ್ತಾಯ ಬಜಪ್ಪಳರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮಾಜಿ ಶಾಸಕಿ ಶಕುಂತಳಾ.ಟಿ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಖ್ಯಾತ ವೈದ್ಯ ಡಾ.ಸುರೇಶ ಪುತ್ತೂರಾಯ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ನ್ಯಾಯವಾದಿ ಮಹೇಶ್ ಕಜೆ, ದಿವಾಕರ ನಿಡ್ವಣ್ಣಾಯ, ಬಾಲಕೃಷ್ಣ ಕಣ್ಣರಾಯ, ಸುಬ್ರಹ್ಮಣ್ಯ ಕಡಂಬಳಿತ್ತಾಯ, ಓಲೆಸರಿ ಮುಂತಾದವರು ಉಪಸ್ಥಿತರಿದ್ದರು.


ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಪುರೋಹಿತ ವೇ. ಮೂ. ಸರ್ವೇಶ್ವರ ಕೇಕುಣ್ಣಾಯ, ವೀಣಾ ನಾಗೇಶ್ ತಂತ್ರಿ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಶಿವಳ್ಳ ಸಂಪದದ ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯ, ಡಾ. ಶ್ರೀಪತಿ ರಾವ್, ರಂಗನಾಥ ಉಂಗ್ರುಪುಳಿತ್ತಾಯ, ಶಿವರಾಜ್ ಅಡಿಗ, ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಪ್ರಭಾಕರ ಕಲ್ಲೂರಾಯ, ಪಾವಂಜೆ ಸತೀಶ ಭಟ್, ವೆಂಕಟೇಶಮೂರ್ತಿ ಉಪಾಧ್ಯ, ಬ್ರಹ್ಮಶ್ರೀ ಗಿರಿಪ್ರಕಾಶ್ ತಂತ್ರಿ ಪೊಳಲಿ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡತ್ತಾಯ, ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗಳ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್, ಹರೀಶ್ ಪುತ್ತೂರಾಯ ಮುಂತಾದವರು ಉಪಸ್ಥಿತರಿದ್ದರು.


ಪಂದ್ಯಕೂಟದಲ್ಲಿ ಉಡುಪಿ, ಕೊಡಗು, ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 150ಕ್ಕೂ ಅಧಿಕ ಆಟಗಾರರು 12 ತಂಡಗಳಲ್ಲಿ ಭಾಗವಹಿಸಿದ್ದರು. ಶಿವಳ್ಳಿ ಫ್ರೆಂಡ್ಸ್ ಪಾವಂಜೆ(ಪ್ರ), ವಿಪ್ರಪ್ರಿಯರು ಉಜಿರೆ ತಂಡ(ದ್ವಿ) ಬಹುಮಾನ ಪಡೆದರು. ವಿಜೇತರಿಗೆ ನಗದು ಬಹುಮಾನ ಹಾಗೂ ಎಸ್‌ಸಿಎಲ್ ಟ್ರೋಫಿ ನೀಡಿ ಅಭಿನಂದಿಸಲಾಯಿತು. ಪಾವಂಜೆ ತಂಡದ ಅವನೀಶ್ ಸರಣಿ ಶ್ರೇಷ್ಠ, ಅತ್ಯುತ್ತಮ ಬ್ಯಾಟರ್ ಪ್ರಶಸ್ತಿ, ಉಜಿರೆ ತಂಡದ ದುರ್ಗಪ್ರಸಾದ್ ಕೆರ್ಮಣ್ಣಾಯ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದರು.

LEAVE A REPLY

Please enter your comment!
Please enter your name here