ಪುತ್ತೂರು: ಕರಾವಳಿ ಉತ್ಸವದ ಪ್ರಯುಕ್ತ ಜ.11 ಮತ್ತು 12 ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಶರಧಿ ಪ್ರತಿಷ್ಠಾನವು ಆಯೋಜಿಸಿದ ಕಲಾಪರ್ಬದಲ್ಲಿ ತನ್ನ ಕಲಾಪ್ರತಿಭೆಯನ್ನು ಅಭಿವ್ಯಕ್ತಪಡಿಸುವ ಮೂಲಕ ಪುತ್ತೂರಿನ ಎಂ.ಪಿ.ರೋಹಿಣಿ ಆಚಾರ್ಯ ಅವರು ಮೆಚ್ಚುಗೆಗೆ ಪಾತ್ರರಾದರು.
ಇವರ ಹೂಗಳು ಮತ್ತು ಪಿನ್ ಹೋಲ್ಡರ್‌ಗಳ ಪ್ರದರ್ಶನ ಮಳಿಗೆಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶರಧಿ ಪ್ರತಿಷ್ಠಾನದಿಂದ ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.