ಪುತ್ತೂರು: ಕಳೆದ 18 ವರ್ಷಗಳಿಂದ ಪುತ್ತೂರಿನ ನಗರದ ಕಲ್ಲೇಗದ ಬಳಿ ಕಾರ್ಯಾಚರಿಸುತ್ತಿದ್ದ ಪುತ್ತೂರಿನ ಜನಮೆಚ್ಚುಗೆಯ ಜನಸ್ನೇಹಿ ವೈದ್ಯ ಡಾ. ರವಿನಾರಾಯಣ್ ಸಿ.ರವರ “ಸಂಜೀವಿನಿ ಕ್ಲಿನಿಕ್” ನೆಹರುನಗರದ ಕೃಷ್ಣಕಮಲ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಜ.14ರಂದು ಶುಭಾರಂಭಗೊಂಡಿತು.
ಬೊಳುವಾರು ಪ್ರಗತಿ ಆಸ್ಪತ್ರೆಯ ಡಾ.ಶ್ರೀಪತಿ ರಾವ್ ಮತ್ತು ಡಾ.ಸುಧಾಶ್ರೀಪತಿ ರಾವ್ ದಂಪತಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ.ಶ್ರೀಪತಿ ರಾವ್ ಈ ಕ್ಲಿನಿಕ್‌ನಿಂದ ಜನರಿಗೆ ಉತ್ತಮ ಸೇವೆ ದೊರಕುವಂತಾಗಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಶುಭಹಾರೈಸಿದರು.
ಸಂಪ್ಯ ಗಣೇಶ್ ಮೆಡಿಕಲ್ ಮಾಲಕ ಶಂಕರನಾರಾಯಣ ಭಟ್, ಡಾ.ಶ್ರೀಕೃಷ್ಣಪ್ರಸಾದ್ ಮುರ, ಅಬಕಾರಿ ಇಲಾಖೆಯ ಪ್ರೇಮಾನಂದ, ಬೇರಿಕೆ ಈಶ್ವರ ಭಟ್, ಕಹಳೆ ನ್ಯೂಸ್ ಮುಖ್ಯಸ್ಥ ಶ್ಯಾಮಸುದರ್ಶನ್ ಸೇರಿದಂತೆ ಹಲವರು ಆಗಮಿಸಿ ಶುಭಹಾರೈಸಿದರು. ಕ್ಲಿನಿಕ್‌ನ ಡಾ.ರವಿನಾರಾಯಣ ಸಿ. ಮತ್ತು ಅಶ್ವಿನಿ ದಂಪತಿ ಅತಿಥಿಗಳನ್ನು ಸತ್ಕರಿಸಿ ಸ್ವಾಗತಿಸಿದರು.