ಕಡಬ: ಕೊಯಿಲ ಗ್ರಾಮದ ಸಬಳೂರು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.13ರಂದು ಮೆಟ್ರಿಕ್ ಮೇಳ ನಡೆಯಿತು.
ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಬೆಳೆಸುವ ಸಲುವಾಗಿ ಅಯೋಜಿಸಿದ ಮೆಟ್ರಿಕ್ ಮೇಳದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಮನೆಯಲ್ಲಿ ಬೆಳೆದ ತಾಜಾ ತರಕಾರಿಗಳು, ಹಣ್ಣುಗಳು, ಪಾನೀಯ ತಿಂಡಿ ತಿನಿಸುಗಳು, ಸೀಯಾಳ, ತೆಂಗಿನಕಾಯಿ, ಕಬ್ಬು, ಗೃಹ ಉಪಯೋಗಿ ವಸ್ತುಗಳನ್ನು ವಿದ್ಯಾರ್ಥಿಗಳು ವ್ಯಾಪರ ಮಾಡಿದರು. ಪೋಷಕರು, ಶಿಕ್ಷಕರು, ಸ್ಥಳಿಯರು ವಿದ್ಯಾರ್ಥಿಗಳೊಂದಿಗೆ ಯಾವುದೇ ಚೌಕಸಿ ನಡೆಸದೆ ತಮಗೆ ಬೇಕಾದ ವಸ್ತುಗಳನ್ನು ಖರಿದೀಸಿದರು.
ಶಾಲಾ ಜಗಲಿ, ಮೈದಾನದಲ್ಲಿ ವಿದ್ಯಾರ್ಥಿಗಳು ವ್ಯಾಪರ ನಡೆಸಿದರು. ವಿದ್ಯಾರ್ಥಿಗಳು ಒಟ್ಟು 17,650 ರೂ.ವ್ಯಾಪರ ನಡೆಸಿದರು. 4ನೇ ತರಗತಿಯ ಪ್ರತೀಕ್ಷಾ 1180 ರೂ.ವ್ಯಾಪರ ನಡೆಸಿ ಪ್ರಥಮ ಹಾಗೂ 6ನೇ ತರಗತಿಯ ಅರ್ಫಾ 1160ರೂ.ವ್ಯಾಪರ ನಡೆಸಿ ದ್ವಿತೀಯ ಸ್ಥಾನ ಪಡೆದುಕೊಂಡರು.
ಮೆಟ್ರಿಕ್ ಮೇಳವನ್ನು ಕೊಯಿಲ ಗ್ರಾ.ಪಂ.ಉಪಾಧ್ಯಕ್ಷ ಯತೀಶ್ ಸೀಗೆತ್ತಡಿ ಉದ್ಘಾಟಿಸಿದರು. ಕೊಯಿಲ ಗ್ರಾ.ಪಂ.ಸದಸ್ಯ ಚಿದಾನಂದ ಪಾನ್ಯಾಲು, ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಗಣೇಶ್ ಎರ್ಮಡ್ಕ, ಎಸ್‌ಡಿಎಂಸಿ ಅಧ್ಯಕ್ಷ ಶೇಖರ ಗೌಡ ಪಾಪುತಮಂಡೆ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ವಾರಿಜ ಬಿ ಸ್ವಾಗತಿಸಿ, ವಂದಿಸಿದರು.