ಪುತ್ತೂರು: NRI ಫೋರಂ ಕರ್ನಾಟಕ ಇದರ ವತಿಯಿಂದ ಬಹ್ರೇನ್ ನಲ್ಲಿ ನಡೆದ ಕರ್ನಾಟಕ ಸಂಗಮ 2025 ಕಾರ್ಯಕ್ರಮದಲ್ಲಿ ಬೆಂಗಳೂರಿನ ಸೌಂದರ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸೌಂದರ್ಯ ಪಿ. ಮಂಜಪ್ಪ ರವರನ್ನು ಸನ್ಮಾನಿಸಲಾಯಿತು.
ಸೌಂದರ್ಯ ಪಿ. ಮಂಜಪ್ಪರವರು ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಶಿಕ್ಷಣ ವಂಚಿತ ವರ್ಗದವರನ್ನ ಮೇಲಕ್ಕೆತ್ತುವ ಕೆಲಸವನ್ನು ಕಳೆದ ಹಲವಾರು ವರುಷಗಳಿಂದ ಮಾಡುತ್ತಾ ಬರುತ್ತಿರುವ ನಿಟ್ಟಿನಲ್ಲಿ ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿನ ಅವರ ಸಮರ್ಪಿತ ಸೇವೆ ಮತ್ತು ಸಮಾಜಮುಖಿ ಸಾಧನೆಗಾಗಿ NRI ಫೋರಂ ಕರ್ನಾಟಕ ಇದರ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ, NRI ಫೋರಂನ ಅಧ್ಯಕ್ಷರಾದ ರಾಜಕುಮಾರ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು. ಸೌಂದರ್ಯ ಪಿ. ಮಂಜಪ್ಪರವರು ಮೂಲತಃ ಪುತ್ತೂರು ತಾಲೂಕಿನ ಕೊಡಿಪಾಡಿ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಪುತ್ತೂರಿನ ಎಸ್.ಬಿ.ಬಿ. ಸೆಂಟರ್ ನಲ್ಲಿ ಶಾಖೆಯನ್ನು ಹೊಂದಿರುವ ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ – ಆಪರೇಟೀವ್ ಲಿ. ನ ಅಧ್ಯಕ್ಷರೂ ಆಗಿದ್ದಾರೆ.