ಕಾವು: ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಗ್ನಿಶಾಮಕದಳ ಸುಳ್ಯ ಇಲ್ಲಿನ ಸಿಬ್ಬಂದಿ ವರ್ಗದವರಿಂದ ವಿದ್ಯಾರ್ಥಿಗಳಿಗೆ ಅಗ್ನಿ ಸುರಕ್ಷತಾ ಕ್ರಮದ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜ.13 ರಂದು ನಡೆಯಿತು.
ಅಗ್ನಿ ಸುರಕ್ಷತಾ ಕ್ರಮದ ಮಾಹಿತಿ ಸಭೆಯಲ್ಲಿ ಶಾಲಾ ಅಧ್ಯಕ್ಷರಾದ ಅಬ್ದುಲ್ ಅಝೀಝ್, ಅಗ್ನಿಶಾಮಕ ದಳದ ಅಧಿಕಾರಿ ಸೋಮನಾಥ, ಬಿ.ನಾಗರಾಜ ಪೂಜಾರಿ, ರಾಜೇಶ್ ದಾವಣಗೆರೆ,ರಫೀಕ್, ರಾಜೇಶ್ ಬಿ ಎಂ, ಮೋಹನ್ ಬಾಬು ಉಪಸ್ಥಿತರಿದ್ದರು. ನಾಗರಾಜ ಪೂಜಾರಿ ಇವರು ಅಗ್ನಿ ಸುರಕ್ಷತೆಯ ಬಗ್ಗೆ ಹೇಗೆ ಕ್ರಮ ವಹಿಸುವುದು ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ರಾಜೇಶ್ ದಾವಣಗೆರೆ ಎಲ್.ಪಿ.ಜಿ.ಯ ಬಗ್ಗೆ ರಕ್ಷಣಾ ಕ್ರಮವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಶಾಲಾ ಮುಖ್ಯ ಗುರು ದೀಪಿಕಾ ಸ್ವಾಗತಿಸಿ, ಹೇಮಲತಾ ಕಜೆಗದ್ದೆ ವಂದಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿ ಅಗ್ನಿ ಸುರಕ್ಷತಾ ಪ್ರಾತ್ಯಕ್ಷಿಕೆಯನ್ನು ಸುಮಾರು ಒಂದು ಗಂಟೆಗಳ ಕಾಲ ನಡೆಸಲಾಯಿತು.