ಬೆಳ್ಳಿಪ್ಪಾಡಿ: ಜಿಲ್ಲಾ ಉತ್ತಮ ಶಿಕ್ಷಕಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕಿ ಯಶೋದಾ ಎನ್.ಎಂ ರವರಿಗೆ ಶಾಸಕ ಅಶೋಕ್ ಕುಮಾರ್ ರೈ ಗೌರವಿಸಿದರು.
ಉದ್ಘಾಟನಾ ಸಮಾರಂಭದ ಸ್ವಾಗತವನ್ನು ಪ್ರಭಾರ ಮುಖ್ಯ ಶಿಕ್ಷಕಿ ಸುಮಿತ್ರಾ ಎಸ್ ಮಾಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜೋಯ್ಲಿನ್ ರೋಡ್ರಿಗಸ್ ಮಲ್ಲಿಕಾರ್ಜುನ್ ಹಡಗಲಿ ಕಾರ್ಯಕ್ರಮ ನಿರೂಪಿಸಿದರು. ವೈಶಾಲಿ ಅಭಿನಂದನಾ ಫಲಕ ವಾಚಿಸಿದರು. ಬಹುಮಾನ ವಿತರಣೆಯ ಪಟ್ಟಿಯನ್ನು ನಯನಾ ಮತ್ತು ನಿಶ್ಮಿತಾ ವಾಚಿಸಿದರು. ಸಲೀನಾ ಎಂ ವಂದನಾರ್ಪಣೆಗೈದರು.