ಪುಣಚ: ಪುಣಚ ಗ್ರಾಮದ ಮೂಡಂಬೈಲು ನಿವಾಸಿ ಹರಿಕೃಷ್ಣ ಶೆಟ್ಟಿ (62 ವ.)ರವರು ಜ.16ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪುಣಚ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರಾಗಿದ್ದ ಅವರು ಈ ಹಿಂದೆ ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರಾಗಿ, ಪುಣಚ ಗ್ರಾ.ಪಂ.ಸದಸ್ಯರಾಗಿ, ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದ ಅವರು ಧಾರ್ಮಿಕ, ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿ ಚಿರಪರಿಚಿತರಾಗಿದ್ದರು.
ಕೆಲದಿನಗಳ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ. ಮೃತರು ಪತ್ನಿ ಶ್ಯಾಮಲಾ ಎಚ್.ಶೆಟ್ಟಿ, ಪುತ್ರಿಯರಾದ ಅನುಷ್ಕಾ ಶೆಟ್ಟಿ, ಆಕೃತಿ ಶೆಟ್ಟಿ ಯವರನ್ನು ಅಗಲಿದ್ದಾರೆ.