ಪುತ್ತೂರು: ಕುರಿಯ ಗ್ರಾಮದ ಉಳ್ಳಾಲ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ನೂತನ ಸದಸ್ಯರನ್ನು ನೇಮಕಗೊಳಿಸಿ ಹಿಂದೂ ಧಾರ್ಮೀಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಕಾರ್ಯದರ್ಶಿಯವರು ಆದೇಶಿಸಿದ್ದಾರೆ.
ಅರ್ಚಕ ಸದಸ್ಯರಾಗಿ ಪ್ರಕಾಶ್ ಕುಮಾರ್ ಕೊಡಂಕೀರಿ, ಪ.ಪಂಗಡದಿಂದ ಆನಂದ ಕುಮಾರ್ ಯು, ಮಹಿಳಾ ಸ್ಥಾನದಿಂದ ಶಶಿಕಲಾ ಎಸ್.ರೈ ಕುರಿಯ ಎಳ್ನಾಡುಗುತ್ತು ಮತ್ತು ಅನಿತಾ ರಮೇಶ್ ರೈ ಡಿಂಬ್ರಿ, ಸಾಮಾನ್ಯ ಸ್ಥಾನದಿಂದ ಗೋಪಾಲಕೃಷ್ಣ ಗೌಡ ಕರೆಜ್ಜ, ಬಿ. ನಾರಾಯಣ ರೈ ಬಳ್ಳಮಜಲು, ಜಯರಾಮ ರೈ ಅಡೈತ್ತಿಮಾರು, ಹರೀಶ್ ಡಿಂಬ್ರಿ, ದಿನೇಶ್ ಸಾಲ್ಯಾನ್ ಬೊಳಂತಿಮಾರ್ ರವರನ್ನು ಆಯ್ಕೆ ಮಾಡಿ ಆದೇಶಿಸಲಾಗಿದೆ.